ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರ್ ಫೈಲ್ಸ್ ದೇಶದಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿ ಹೋತ್ರಿ ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಗೆಲ್ಲಿಸಿದ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಾಶ್ಮೀರ್ ಫೈಲ್ಸ್‌ಚಿತ್ರದ ಗೆಲುವು ಮುಂದಿನ ಕೆಲಸಗಳಿಗೆ ಹೆಚ್ಚಿನ ಸ್ಫೂರ್ತಿ ನೀಡಿದ್ದು ದಶಕಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಹಿಂದುಗಳ ಮಾರಣ ಹೋಮದ ಕುರಿತು ಯುವಜನತೆಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ವೀಕ್ಷಿಸಿ ಅಭಿನಂದಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು, ಇನ್ನು ಮುಂದೆ ʼದೆಲ್ಲಿ ಫೈಲ್ಸ್ʼ ಚಿತ್ರದ ಮೇಲೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಈಗಾಗಲೇ ದೆಲ್ಲಿ ಫೈಲ್ಸ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಕೆಂಬಣ್ಣದ ಭಾರತದ ರಾಷ್ಟ್ರಿಯ ಲಾಂಛನದ ಮೇಲೆ ಮನುಷ್ಯನಾಕೃತಿಯ ನೆರಳು ಕುತೂಹಲ ಮೂಡಿಸುವಂತಿದೆ.