ಹೊಸದಿಗಂತ ಡಿಜಿಟಲ್ ಡೆಸ್ಕ್
ಕೊರೋನಾ ಸಾಂಕ್ರಾಮಿಕದಿಂದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ 43 ದಿನಗಳ ಅಮರನಾಥ ಯಾತ್ರೆ ಜೂನ್ 30 ರಿಂದ ಆರಂಭವಾಗಲಿಡಿದ್ದು, ಈ ಬಾರಿ ಯಾತ್ರೆಗೆ ಈವರೆಗೂ 33, 795 ಯಾತ್ರಾರ್ಥಿಗಳು ನೋಂದಣಿಯಾಗಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅಮರನಾಥ ದೇವಾಲಯ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೀಶ್ ಕುಮಾರ್ ಶನಿವಾರದವರೆಗೂ ಸುಮಾರು 33, 795 ಯಾತ್ರಾರ್ಥಿಗಳು ಅಮರನಾಥ ಯಾತ್ರೆಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವುದಾಗಿ ಹೇಳಿದ್ದಾರೆ.
22, 229 ಯಾತ್ರಾರ್ಥಿಗಳು ಆನ್ ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದರೆ 11,566 ಮಂದಿ ಆಫ್ ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ. 43 ದಿನಗಳ ಯಾತ್ರೆ ದಕ್ಷಿಣ ಕಾಶ್ಮೀರದ ಪಾಲ್ಗಂ ಮತ್ತು ಬೆಲ್ಟಾಲ್ ಮಾರ್ಗದ ಮೂಲಕ ಆರಂಭವಾಗಲಿದೆ.
ಇನ್ನು ಯಾತ್ರೆಯ ಎರಡು ಮಾರ್ಗಗಳಲ್ಲಿನ ಭಕ್ತರ ಚಲನವಲನ ಪತ್ತೆಯಾಗಿ ಸರ್ಕಾರ ಈ ಬಾರಿ ರೆಡಿಯೊ ಪ್ರಿಕ್ವೆನ್ಸಿ ಐಡೆಂಟಿಪಿಕೇಷನ್ ಸಿಸ್ಟಂ ಪರಿಚಯಿಸಿದೆ. ಭಕ್ತರ ನೋಂದಣಿಯಾಗಿ ದೇಶಾದ್ಯಂತ 566 ಶಾಖೆಗಳನ್ನು ಅಮರನಾಥ ದೇವಾಲಯ ಆಡಳಿತ ಮಂಡಳಿಯಿಂದ ತೆರೆಯಲಾಗಿದೆ.