ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹಳ ಸುಲಭವಾಗಿ ಗೋಧಿ ಹಿಟ್ಟಿನಿಂದ ಪಿಜಾ ಮಾಡೋದನ್ನು ನಾವು ಹೇಳ್ತೀವಿ ನೋಡಿ. ಆರೋಗ್ಯಕ್ಕೂ ಒಳ್ಳೆಯದು, ಮಾಡುವ ವಿಧಾನವೂ ಸುಲಭ.
ಬೇಕಾಗುವ ಪದಾರ್ಥಗಳು
2 ಕಪ್ ಗೋಧಿ ಹಿಟ್ಟು
1/4 ಟೀಸ್ಪೂನ್ ಬೇಕಿಂಗ್ ಸೋಡಾ
1 ಟೀಸ್ಪೂನ್ ಬೇಕಿಂಗ್ ಪೌಡರ್
1/2 ಟೀಸ್ಪೂನ್ ಉಪ್ಪು
2 ಟೇಬಲ್ಸ್ಪೂನ್ ಆಲಿವ್ ಎಣ್ಣೆ
1/4 ಕಪ್ ಮೊಸರು
ನೀರು (ಬೆರೆಸಲು)
ಪಿಜಾ ಸಾಸ್
1/2 ಕಪ್ ಟೊಮೆಟೊ ಸಾಸ್
1/4 ಕಪ್ ಚಿಲ್ಲಿ ಸಾಸ್
1 ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್
1 ಟೀಸ್ಪೂನ್ ಮಿಕ್ಸ್ಡ್ ಹರ್ಬ್ಸ್
ಟಾಪಿಂಗ್ಸ್ ತರಕಾರಿ (ನಿಮ್ಮ ಆಯ್ಕೆ)
ಈರುಳ್ಳಿ
ಕ್ಯಾಪ್ಸಿಕಂ
ಟೊಮೆಟೊ
ಜಲೆಪೆನೊ
ಆಲಿವ್
ಸ್ವೀಟ್ ಕಾರ್ನ್
ಚೀಸ್
ಮಾಡುವ ವಿಧಾನ:
ಒಂದು ಬಟ್ಟಲಿಗೆ2 ಕಪ್ ಗೋಧಿ ಹಿಟ್ಟು, 1/4 ಟೀಸ್ಪೂನ್ ಬೇಕಿಂಗ್ ಸೋಡಾ, 1 ಟೀಸ್ಪೂನ್ ಬೇಕಿಂಗ್ ಪೌಡರ್, 1/2 ಟೀಸ್ಪೂನ್ ಉಪ್ಪು,2 ಟೇಬಲ್ಸ್ಪೂನ್ ಆಲಿವ್ ಎಣ್ಣೆ, ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿ ಬಳಿಕ ಇದಕ್ಕೆ 1/4 ಕಪ್ ಮೊಸರು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸುತ್ತಾ ಹಿಟ್ಟನ್ನು ಗಂಟಿಲ್ಲದಂತೆ ಮೃದುವಾಗಿ ಬೆರೆಸಿ ಒಂದು ತಣ್ಣೀರು ಬಟ್ಟೆಯಿಂದ 20 ನಿಮಿಷಗಳ ಕಾಲ ಬಟ್ಟಲನ್ನು ಮುಚ್ಚಿ.
ಮೇಲೆ ನೀಡಿರುವ ಎಲ್ಲಾ ಸಾಸ್‌ಗಳನ್ನು ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. 20ನಿಮಿಷಗಳ ಬಳಿಕ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ನಾದಿಕೊಂಡು ಅದನ್ನು ಚಪಾತಿಯಂತೆ ಅಗಲ ಹಾಗೂ ದಪ್ಪವಾಗಿ ಲಟ್ಟಿಸಿಕೊಂಡು ಅಂಚಿನಲ್ಲಿ ಫೋರ್ಕ್‌ನಿಂದ ಚುಚ್ಚಿ ಸ್ವಲ್ಪ ಎಣ್ಣೆ ಹಾಕಿ ಬೇಸ್ ಮೇಲೆ ಸವರಿ.
ಇದೀಗ ಓವೆನ್ ಇಲ್ಲದೆ ಸ್ವಲ್ಪ ಕಾದ ಕಬ್ಬಿಣದ ಎಂಚಿನ ಮೇಲೆ ಈ ಬೇಸ್ ಅನ್ನು ಹಾಕಿ 2/3ನಿಮಿಷಗಳ ಕಾಲ ತಿರುವಿ ಹಾಕಿ ಬೇಯಿಸಿಕೊಳ್ಳಬೇಕು. ನಂತರ ಮಿಶ್ರಣ ಮಾಡಿದ ಸಾಸ್ ಅನ್ನು ಬೇಸ್ ಮೇಲೆ ಹರಡಿ ನಿಮಗೆ ಇಷ್ಟವಾದ ತರಕಾರಿಯನ್ನು ಪಿಜಾ ಬೇಸ್ ಮೇಲೆ ಹರಡಿ ಕೊನೆಗೆ ಚೀಸ್ ಹಾಕಿ ಅದರ ಮೇಲೆ ಮುಚ್ಚಳ ಮುಚ್ಚಿ. ಸಣ್ಣ ಉರಿಯಲ್ಲಿ ಹತ್ತು ನಿಮಿಷಗಳವರೆಗೆ ಬೇಯಿಸಿ ಹೊರತೆಗೆದರೆ, ರುಚಿ ರುಚಿಯಾದ ಪಿಜಾ ಸವಿಯಲು ಸಿದ್ದ.