ಬಾಲಿವುಡ್‌ಗೆ ಭಯಪಡಿಸಲು ಮತ್ತೊಮ್ಮೆ ಬರುತ್ತಿದ್ದಾಳೆ ʼಮಂಜುಲಿಕಾʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕನ್ನಡದ ʼನಾಗವಲ್ಲಿʼ ಯು ಬಾಲಿವುಡ್‌ ಗೆ ಹೋಗಿ ಮಂಜುಲಿಕಾ ಅಗಿ ಬದಲಾಗಿ “ಆಮಿ ಝೇ ತೋಮಾ” ಹಾಡು ಹಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಕನ್ನಡದ ʼರಾರಾʼ ಹಾಡಿನಂತೆ ಈ ಹಾಡು ಕೂಡ ಜನ ಮನ್ನಣೆ ಗಳಿಸಿತ್ತು. ಈಗ ಮತ್ತೊಮ್ಮೆ ಬಾಲಿವುಡ್‌ ಅಂಗಳದಲ್ಲಿ ʼಮಂಜುಲಿಕಾʼ ಕುರಿತಾಗಿ ಚರ್ಚೆಯಾಗುತ್ತಿದೆ. ಕೆಲವರು ಅವಳು ಮತ್ತೆ ವಾಪಸ್‌ ಬಂದಿದ್ದಾಳೆ ಎಂದು ಹೇಳುತ್ತಿದ್ದಾರೆ.

ಹೌದು, ʼಭೂಲ್‌ ಭುಲಯ್ಯಾ-2ʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗುವುದರೊಂದಿಗೆ ʼಮಂಜುಲಿಕಾʼಳ ಕಥೆಯೂ ತೆರೆದುಕೊಂಡಿದೆ. ಹಿಂದಿನ ಕಥೆಗೂ ಈ ಕಥೆಗೂ ಸಂಬಂಧವಿದೆಯಾ ಎಂಬುದು ಸಿನೆಮಾ ನೋಡಿದ ಮೇಲಷ್ಟೆ ತಿಳಿಯುತ್ತದೆ. ಟ್ರೇಲರ್‌ ನಲ್ಲಂತೂ ಈ ಕುರಿತು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ, ಈಕೆ ಬೇರೆ ʼಮಂಜುಲಿಕಾʼ ಕೂಡ ಆಗಿರಬಹುದು. ಆದರೆ ʼಆಮಿ ಝೇ ತೋಮಾʼ ಹಾಡನ್ನಂತೂ ಹಾಡಿರುವುದು ಸ್ಪಷ್ಟ.

ಇನ್ನು ಅನೀಸ್‌ ಬಾಜ್ಮೀ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್‌ನ ಕಬೀರ್‌ ಸಿಂಗ್‌ ಖ್ಯಾತಿಯ ಕಿಯಾರಾ ಅಡ್ವಾಣಿ, ಲುಕಾ ಛುಪ್ಪಿ ಖ್ಯಾತಿಯ ಕಾರ್ತಿಕ್‌ ಆರ್ಯನ್‌, ಹಿರಿಯ ನಟಿ ತಾಬು, ಹಾಗೆಯೇ ಹಾಸ್ಯಪಾತ್ರದಲ್ಲಿ ರಾಜ್‌ ಪಾಲ್‌ ಯಾದವ್‌ ನಟಿಸಿದ್ದು ಕಾಮೆಡಿ ಥ್ರಿಲ್ಲರ್‌ ಮತ್ತು ಹಾರರ್‌ ಈ ಮೂರೂ ಪ್ರಕಾರಗಳ ಮಿಶ್ರಣವಾಗಿದ್ದು ಟ್ರೇಲರ್‌ ನಲ್ಲಿ ಕಾಮಿಡಿ ಛಾಯೆ ಜಾಸ್ತಿಯಿದೆ. ಬಿಡುಗಡೆಯಾಗಿ ಅರ್ಧಗಂಟೆಯಲ್ಲಿ 1 ಮಿಲಿಯನ್‌ ಜನರು ವೀಕ್ಷಿಸಿದ್ದು ಚಿತ್ರದ ಕುರಿತು ಅಭಿಮಾನಿಗಳ ಕಾತರತೆಯನ್ನು ಸಾಬೀತು ಮಾಡುವಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!