ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ: ಮೇ.20ಕ್ಕೆ ಮತದಾನ, ಮೇ.22ಕ್ಕೆ ಮತಏಣಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ ನಗರ ಸ್ಥಳೀಯ ಸಂಸ್ಥೆಗೆ ಸಾರ್ವತ್ರಿಕ ಚುನಾವಣೆ ಹಾಗೂ ಕೆಲ ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ವಿಶೇಷ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದ್ದು, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಗರಸಭೆಯ 21ನೇ ವಾರ್ಡ್ ಗೆ ಸಾರ್ವತ್ರಿಕ ಚುನಾವಣೆ, ದಾವಣಗೆರೆ, ಬೀದರ್, ಬೆಂಗಳೂರು ನಗರ, ಹಾಸನ, ಕಲಬುರ್ಗಿ ಹಾಗೂ ಬೆಳಗಾವಿ ಜಿಲ್ಲೆಯ ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದೆ.
ಮೇ. 02 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.ಮೇ.09 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಮೇ. 10 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ. 12 ಉಮೇದುವಾರಿಕೆ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ.
ಮೇ. 2 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯಕತೆ ಇದ್ದಲ್ಲಿ ದಿನಾಂಕ 21 ರಂದು ನಡೆಯಲಿದೆ. ಮತ ಏಣಿಕೆ ಕಾರ್ಯ ಮೇ. 22 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ
ತುಮಕೂರು – ಶಿರಾ – ನಗರಸಭೆ ವಾರ್ಡ್ ನಂ.21

ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ

ದಾವಣಗೆರೆ – ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ನಂ.28, 37 ಹಾಗೂ ಚನ್ನಗಿರಿ ಪುರಸಭೆ ವಾರ್ಡ್ ನಂ.16
ಬೀದರ್ – ಬಸವಕಲ್ಯಾಣ ನಗರಸಭೆ ವಾರ್ಡ್ ಸಂಖ್ಯೆ 25
ಬೆಂಗಳೂರು ನಗರ – ಆನೇಕಲ್ ಪುರಸಭೆ ವಾರ್ಡ್ ಸಂಖ್ಯೆ 14, 16, 17
ಹಾಸನ – ಹೊಳೆನಗರಸೀಪುರ ಪುರಸಭೆ ವಾರ್ಡ್ ಸಂಖ್ಯೆ 3
ಕಲಬುರ್ಗಿ – ಜೇವರ್ಗಿ ಪುರಸಭೆ ವಾರ್ಡ್ ಸಂಖ್ಯೆ 10
ಬೆಳಗಾವಿ – ಸಂಕೇಶ್ವರ ಪುರಸಭೆಯ ವಾರ್ಡ್ ನಂ.13ಕ್ಕೆ ಉಪ ಚುನಾವಣೆ ನಡೆಯಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!