ವಾರಣಾಸಿಯನ್ನು ಸ್ವಚ್ಛ, ಸುಂದರ ನಗರಿಯಾಗಿಸಿದ್ದಕ್ಕೆ ಮೋದಿಯವರನ್ನು ಶ್ಲಾಘಿಸಿದ ಪ್ರಖ್ಯಾತ ಎನ್‌ಬಿಎ ಸ್ಟಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪವಿತ್ರ ನಗರಿ ವಾರಣಾಸಿಗೆ ʼಆಧ್ಯಾತ್ಮಿಕ ಪ್ರಯಾಣʼ ಕೈಗೊಂಡಿರುವ ಖ್ಯಾತ ಬ್ಯಾಸ್ಕೆಟ್‌ ಬಾಲ್‌ ಆಟಗಾರ ಡ್ವೈಟ್ ಹೊವಾರ್ಡ್, ವಾರಣಾಸಿಯನ್ನು ಸ್ವಚ್ಛ, ಸುಂದರ ನಗರವನ್ನಾಗಿ ಅಭಿವೃದ್ಧಿಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮನಸ್ಪೂರ್ತಿಯಾಗಿ ಶ್ಲಾಘಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ವಾರಣಾಸಿಯ ಆಧ್ಯಾತ್ಮಿಕ ಪ್ರಯಾಣ ನನ್ನ ಆತ್ಮವನ್ನು ಪುನರುಜ್ಜೀವನಗೊಳಿಸಿದೆ.
ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ ನಂತರ ನನ್ನೊಳಗೆ ಶಾಂತಿ ನೆಲೆಯಾಗಿದೆ. ಪವಿತ್ರ ನಗರವನ್ನು ಅತ್ಯದ್ಭುತ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ವಾರಣಾಸಿಯು ಅನೇಕ ಅನೇಕ ಜನರಿಗೆ ಆಧ್ಯಾತ್ಮಿಕವಾಗಿ ಸ್ಫೂರ್ತಿ ನೀಡಿದೆ, ಈ ಭೇಟಿಗೆ ನಾನು ವಿನಮ್ರನಾಗಿದ್ದೇನೆ. ಈ ಪವಿತ್ರ ನಗರದ ಪುನರ್‌ ನಿರ್ಮಾಣವು ಇನ್ನೂ ಹಲವರನ್ನು ಪ್ರೇರೇಪಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಕೂಡ ಬಾಸ್ಕೆಟ್‌ಬಾಲ್ ಆಟಗಾರನ ಭೇಟಿಯ ಕುರಿತಾಗಿ ಮಾಹಿತಿ ನೀಡಿದೆ.

ವಿಶ್ವ-ಪ್ರಸಿದ್ಧ ಬ್ಯಾಸ್ಕೆಟ್‌ಬಾಲ್ ಆಟಗಾರ ಮತ್ತು ಎನ್‌ ಬಿಎ ಚಾಂಪಿಯನ್ ಡ್ವೈಟ್ ಹೊವಾರ್ಡ್ ವಾರಣಾಸಿಗೆ ಆಗಮಿಸಿದ್ದರು. ಅವರು ಗಂಗಾ ಆರತಿಯನ್ನು ವೀಕ್ಷಿಸಿದರು. ಜೊತೆಗೆ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಸಮ್ಮಿಲನವಾದ ಈ ಪ್ರಾಚೀನ ನಗರಕ್ಕೆ ತಮ್ಮ ಭೇಟಿಯ ಅನುಭವವನ್ನು ಹಂಚಿಕೊಂಡರು. ಎಂದು ಯುಪಿ ಪ್ರವಾಸೋದ್ಯಮ ಟ್ವೀಟ್ ಮಾಡಿದೆ.
ಹೊವಾರ್ಡ್ ಪ್ರಸ್ತುತ ಉತ್ತರ ಅಮೆರಿಕಾದ ʼವೃತ್ತಿಪರ ಬ್ಯಾಸ್ಕೆಟ್‌ಬಾಲ್ ಲೀಗ್ʼ ಎನ್‌ ಬಿಎನಲ್ಲಿ ʼಲಾಸ್ ಆಂಗಲ್ಸ್ ಲೇಕರ್ಸ್‌ʼ ತಂಡದ ಸೆಂಟರ್-ಫಾರ್ವರ್ಡ್ ಆಟಗಾರನಾಗಿ ಆಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!