ವರದಕ್ಷಿಣೆಕೊಡಲಿಲ್ಲವೆಂದು ಹೆಂಡತಿಯ ಅತ್ಯಾಚಾರದ ವೀಡಿಯೋ ಅಪ್ಲೋಡ್‌ ಮಾಡಿದ ಕ್ರೂರಿ ಗಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ವರದಕ್ಷಿಣೆಯನ್ನು ಕೊಡಲಿಲ್ಲ ಎಂಬ ಕಾರಣದಿಂದ ಹೆಂಡತಿಯನ್ನು ಸಂಬಂಧಿಕರಿಗೆ ಅತ್ಯಾಚಾರ ಮಾಡಲು ಬಿಟ್ಟು ಅದನ್ನು ಚಿತ್ರೀಕರಿಸಿ ಜಾಲತಾಣವೊಂದಕ್ಕೆ ಅಪ್ಲೋಡ್‌ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಈ ಕುರಿತು ಸಂತ್ರಸ್ತೆಯು ಪೋಲೀಸರಿಗೆ ದೂರು ನೀಡಿದ್ದು “ವರದಕ್ಷಿಣೆ ಕೊಡಲಿಲ್ಲ ಎಂದು ತನ್ನ ಪತಿ ಹಾಗೂ ಆತನ ಸಂಬಂಧಿಕರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅದನ್ನು ಚಿತ್ರೀಕರಿಸಿ ಯೂಟ್ಯುಬ್‌ ಗೆ ಅಪ್ಲೊಡ್‌ ಮಾಡಿದ್ದಾರೆ” ಎಂದು ಹೇಳಿದ್ದಾಳೆ.
ವರದಕ್ಷಿಣೆ ಕೊಡಲಿಲ್ಲವೆಂದು ಗಂಡ ಪದೇ ಪದೇ ಪೀಡಿಸಿದ ನಂತರ ಹೆಂಡತಿಯು ತವರು ಮನೆಗೆ ವಾಪಸ್‌ ಆಗಿದ್ದಳು. ಆದರೆ ಪತಿರಾಯ ಅವಳನ್ನು ವಾಪಸ್‌ ಕರೆದುಕೊಂಡು ಬಂದು ತನ್ನಿಬ್ಬರು ಸಂಬಂಧಿಕರೊಂದಿಗೆ ಅತ್ಯಾಚಾರ ಎಸಗಿದ್ದಾನೆ. ಆ ವೀಡಿಯೋವನ್ನು ಅಪ್ಲೋಡ್‌ ಮಾಡಿ ಅದರಿಂದ ವರದಕ್ಷಿಣೆ ಹಣ ಪಡೆದುಕೊಳ್ಳುತ್ತೇನೆ ಎನ್ನುವ ಮೂಲಕ ವಿಕೃತಿ ಮೆರೆದಿದ್ದಾನೆ. ಆತನ ಸಂಬಂಧಿಗಳೂ ಕೂಡ ವಿವಾಹಿತರಾಗಿದ್ದು ಅವರ ಹೆಂಡತಿಯರೂ ಕೂಡ ಇದಕ್ಕೆ ಕುಮ್ಮಕ್ಕು ನೀಡಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!