ವಿಪಕ್ಷಗಳು ಬಿಂಬಿಸುವಂತೆ ಕಲ್ಲಿದ್ದಲು ಅಭಾವ ಸೃಷ್ಟಿಯಾಗಿಲ್ಲ, ವಿದ್ಯುತ್‌ ಸ್ಥಾವರಗಳಲ್ಲಿ ಸಂಗ್ರಹ ಸಾಕಷ್ಟಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ
ದೇಶದಲ್ಲಿ ಅತಿಯಾದ ಬಿಸಿಲು ಮತ್ತು ಆರ್ಥಿಕತೆ ಉತ್ತಮವಾಗಿದ್ದರಿಂದ‌ ವಿದ್ಯುತ್ ಬಳಕೆ ಹೆಚ್ಚಾದ ಕಾರಣ ಕಲ್ಲಿದಲು ಅಭಾವಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆದರೆ ಇನ್ನು 10 ದಿನಗಳಲ್ಲಿ ದೇಶದಲ್ಲಿ ಕತ್ತಲು ಆವರಿಸುತ್ತದೆ ಎಂದು ವಿರೋಧ ಪಕ್ಷದವರು ಬಿಂಬಿಸುತ್ತಿದ್ದಾರೆ. ಅದು ಸರಿ ಎಲ್ಲ. ನಾವು ಪ್ರತಿ ದಿನ 1.7 ಮಿಲಿಯನ್ ಟನ್ ಸರಬರಾಜು ಮಾಡುತ್ತಿದ್ದೇವೆ ಎಂದರು.
ಥರ್ಮಲ್ ಪವರ್ ಪ್ಲಾಂಟ್ ನಲ್ಲಿ ಈಗ 21.55 ಮಿಲಿಯನ್ ಟನ್ ಹಾಗೂ ಕೋಲ್ ಕಂಪನಿಯಲ್ಲಿ 72.5 ಮಿಲಿಯನ್ ಕಲ್ಲಿದ್ದಲು ಸಂಗ್ರಹವಿದೆ. ಆದರೆ ಈ ತಿಂಗಳು ಹೆಚ್ಚು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!