ಸೋಷಿಯಲ್‌ ಮೀಡಿಯಾ ಸೆನ್ಸೇಷನ್‌ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳಿಂದ ಗಂಭೀರ ಹಲ್ಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಲಿಪ್‌ ಸಿಂಕ್‌ ವಿಡಿಯೋಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಖ್ಯಾತಿ ಸಂಪಾದಿಸಿರುವ ತಾಂಜೇನಿಯಾದ ಕಿಲಿ ಪೌಲ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗಂಭೀರ ಹಲ್ಲೆ ನಡೆಸಿದ್ದಾರೆ.
ಆಫ್ರಿಕಾದ ತಾಂಜೇನಿಯಾದ ಕಲಾವಿದ ಕಿಲಿ ಪೌಲ್ ಭಾರತೀಯ ಹಾಡುಗಳಿಗೆ ರೀಲ್ಸ್ ಮತ್ತು ಲಿಪ್ ಸಿಂಕ್ ಮಾಡುವ ಮೂಲಕ ಫೇಮಸ್ ಆಗಿದ್ದವರು. ಕನ್ನಡದ ಕೆಜಿಎಫ್ 2, ಕಚ್ಚಾ ಬಾದಾಮ್, ಪ್ರಸಿದ್ಧ ಬಾಲಿವುಡ್‌ ಸಾಗ್‌ ಗಳಿಗೆ ಅವರು ಲಿಪ್‌ ಸಿಂಗ್‌ ಮಾಡಿರುವ ವಿಡಿಯೋಗಳು ಭಾರತದಾದ್ಯಂತ ಫೇಮಸ್‌ ಆಗಿವೆ.

ಕಿಮೋ ಮೇಲೆ ಏಕಾಏಕಿ ದಾಳಿನಡೆಸಿದ ಅಪರಿಚಿತ ವ್ಯಕ್ತಿಗಳು ಚಾಕು ಹಾಗೂ ದೊಣ್ಣೆಯಿಂದ ಥಳಿಸಿದ್ದಾರೆ. ಈ ವೇಳೆ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಹೋರಾಟ ತೋರಿದಾಗ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಘಟನೆಯ ಬಗ್ಗೆ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಿಲಿ, ಐವರು ವ್ಯಕ್ತಿಗಳು ನನ್ನ ಮೇಲೆ ದಾಳಿ ಮಾಡಿದರು. ಅವರು ಚಾಕುವಿನಿಂದ ಹಲ್ಲೆ ನಡೆಸಿದಾಗ ನನ್ನ ಬೆರಳಿಗೆ ಘಾಸಿಯಾಗಿದೆ. ಮತ್ತು ಈ ವೇಳೆ ನನ್ನನ್ನು ರಕ್ಷಿಸಿಕೊಳ್ಳಲು ನಾನು ಹೋರಾಟ ನಡೆಸಿದೆ. ಕೋಲುಗಳು ಮತ್ತು ದೊಣ್ಣೆಯಿಂದ ಅವರನ್ನು ಹೊಡೆದೋಡಿಸಿದ್ದೇನೆ. ನಾನು ಇಬ್ಬರಿಗೆ ಹೊಡೆದ ನಂತರ ಎಲ್ಲರೂ ಓಡಿದರು. ನಾನು ಗಂಭೀರವಾಗಿ ಗಾಯಗೊಂಡಿದ್ದೇನೆ. ನನ್ನ ಬಲಗೈಗೆ ಐದು ಹೊಲಗೆ ಹಾಕಿದ್ದಾರೆ. ದಯವಿಟ್ಟು ನನಗಾಗಿ ಪ್ರಾರ್ಥಿಸಿ ಎಂದು ತಾವು ಆಸ್ಪತ್ರೆಯಲ್ಲಿ ದಾಖಲಾಗಿರುವ ಪೋಟೋ ಹಂಚಿಕೊಂಡಿದ್ದಾರೆ.

ಕಿಲಿ ಪಾಲ್ 3.6 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದಾರೆ. ಇವರ ಜನಪ್ರಿಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಾತನಾಡಿದ್ದರು. ಮನ್ ಕಿ ಬಾತ್ ನಲ್ಲಿ ಭಾರತದ ಪ್ರಾದೇಶಿಕ ಭಾಷೆಗಳ ಹಾಡಿಗೂ ಲಿಪ್ ಸಿಂಕ್ ಮಾಡುವಂತೆ ಕೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!