ಮೋದಿಸರ್ಕಾರ ಆರ್ಥಿಕತೆಯ ಬದಲು ಏಕರೂಪ ನಾಗರೀಕ ಸಂಹಿತೆಗೆ ಪ್ರಾಶಸ್ತ್ಯ ಕೊಡುತ್ತಿದೆ: ಓವೈಸಿ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್

“ಒಂದು ಕಡೆ ದೇಶದ ಆರ್ಥಿಕತೆಯು ಹದಗೆಡುತ್ತಿದೆ. , ಕಲ್ಲಿದ್ದಲು ಸಾಗಿಸಲು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ, ನಿರುದ್ಯೋಗ ಹೆಚ್ಚುತ್ತಿದೆ ಆದರೆ ಮೋದಿ ಸರ್ಕಾರ ಇವುಗಳನ್ನು ಬಿಟ್ಟು ಏಕರೂಪ ನಾಗರೀಕ ಸಂಹಿತೆ (ಯೂನಿಫಾರ್ಮ್‌ ಸಿವಿಲ್‌ ಕೋಡ್‌) ಬಗ್ಗೆ ಜಾಸ್ತಿ ಆಸಕ್ತಿ ತೋರುತ್ತಿದೆ” ಎಂದು ಹೈದ್ರಾಬಾದ್ ಸಂಸದ ಅಸಾಸುದ್ದೀನ್‌ ಓವೈಸಿ ಆರೋಪಿಸಿದ್ದಾರೆ.

“ಈ ದೇಶಕ್ಕ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿಲ್ಲ. ಗೋವಾ ಸಿವಿಲ್ ಕೋಡ್ ಪ್ರಕಾರ, 30 ವರ್ಷ ವಯಸ್ಸಿನೊಳಗೆ ಗಂಡು ಮಗುವನ್ನು ಹೊಂದಿಲ್ಲದಿದ್ದರೆ ಹಿಂದೂ ಪುರುಷರು ಎರಡನೇ ವಿವಾಹದ ಹಕ್ಕನ್ನು ಹೊಂದಿದ್ದಾರೆ. ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಆರ್ಟಿಕಲ್ 38 ರ ಅಡಿಯಲ್ಲಿ ದೇಶದ ಪ್ರತಿಯೊಬ್ಬರಿಗೂ ಸಮಾನ ಆದಾಯ ಹೊಂದುವ ಹಕ್ಕಿದೆ. ಯುಸಿಸಿ ಅಗತ್ಯವಿಲ್ಲ ಎಂದು ಕಾನೂನು ಆಯೋಗ ಕೂಡ ಹೇಳಿದೆ. ಹಿಂದೂ ಅವಿಭಜಿತ ಕುಟುಂಬಕ್ಕೆ ತೆರಿಗೆ ರಿಯಾಯಿತಿ ಇದೆ. ಆದರೆ ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಇಲ್ಲ. ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಸಂಸ್ಕೃತಿಯ ರಕ್ಷಣೆಗೆ ಸಂವಿಧಾನಬದ್ಧ ರಕ್ಷಣೆಯಿದೆ. ಇದನ್ನು ತೆಗೆದುಹಾಕಲಾಗುತ್ತದೆಯೇ?” ಎಂದು ಓವೈಸಿ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!