ಹೊಸದಿಗಂತ ವೆರದಿ, ಕಲಬುರಗಿ
ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿ ಹಾಗೂ ಟೀಂ ಅನ್ನು ಮಹಿಳಾ ನಿಲಯದಿಂದ ಸಿಐಡಿ ಕಚೇರಿಗೆ ಕರೆ ತಂದಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ದಿವ್ಯಾ ಹಾಗರಗಿ ಜೊತೆಗೆ ಜ್ಯೋತಿ ಪಾಟೀಲ್, ಸುನೀತಾ ಮತ್ತು ಅರ್ಚನಾ ಅವಳನ್ನು ಸಹ ಸಿಐಡಿ ಕಚೇರಿಗೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ.
ಸಿಐಡಿ ಕಚೇರಿಯಲ್ಲಿ ದಿವ್ಯಾ ಹಾಗರಗಿ ಮತ್ತು ಟೀಂನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ನಂತರ ಸ್ಥಳವನ್ನು ಮಹಜರ ಮಾಡಲು ನಾಲ್ಕು ಜನರನ್ನು ಜ್ಞಾನ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಗೆ (ಪಿಎಸ್ಐ ಪರೀಕ್ಷಾ ಕೇಂದ್ರ)ಕ್ಕೆ ಕರೆದುಕೊಂಡು ಹೋಗಲಿರುವ ಮಾಹಿತಿ ಲಭ್ಯವಾಗಿದೆ.
ಭಾನುವಾರ ಬೆಳಿಗ್ಗೆ ದಿವ್ಯಾ ಹಾಗರಗಿ ಹಾಗೂ ಸುನೀತಾ ಪಾಟೀಲ್, ಅರ್ಚನಾ, ಸುನಂದ, ಜ್ಯೋತಿ ಪಾಟೀಲ್, ಕಾಳಿದಾಸ ಹಾಗೂ ಉದ್ಯಮಿ ಸುರೇಶ್ ಕಾಟೇಗಾಂವ್ ಸೇರಿದಂತೆ ಒಟ್ಟು 7 ಜನರಿಗೆ ವೈದ್ಯಕೀಯ ಪರೀಕ್ಷೆಗೆ ಸಿಐಡಿ ಅಧಿಕಾರಿಗಳು ಕರೆದುಕೊಂಡು ಹೋದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ