ಹೊಸದಿಗಂತ ಡಿಜಿಟಲ್ ಡೆಸ್ಕ್:
ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸಿದಾಗ, ಅಂಗಡಿಗಳ ಮೊರೆ ಹೋಗದೆ ಮನೆಯಲ್ಲೇ ರುಚಿ ರುಚಿಯಾದ ಬೆಂಡೇಕಾಯಿ ಫ್ರೈ ಟ್ರೈ ಮಾಡಿ. ಆರೋಗ್ಯಕ್ಕೂ ಹಿತಕರ, ಮನಿ ಸೇವ್ ಕೂಡ ಆಗುತ್ತೆ. ಹಾಗಾದ್ರೆ ಗರಿಗರಿಯಾಗಿ ಬೆಂಡೇಕಾಯಿ ಫ್ರೈ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
ಬೇಕಾಗುವ ಪದಾರ್ಥಗಳು
15-20 ಬೆಂಡೆಕಾಯಿ
ಅರ್ಧ ಚಮಚ ಅರಿಶಿಣ ಪುಡಿ
ಅರ್ಧ ಚಮಚ ಖಾರದ ಪುಡಿ
ಅರ್ಧ ಚಮಚ ಕೊತ್ತಂಬರಿ ಪುಡಿ
1/4 ಚಮಚ ಜೀರಿಗೆ ಪುಡಿ
ರುಚಿಗೆ ತಕ್ಕ ಉಪ್ಪು
1-2 ಚಮಚ ಎಣ್ಣೆ
ಮಾಡುವ ವಿಧಾನ
ಈಗ ಬೇಕಿಂಗ್ ಟ್ರೇಗೆ ನಾನ್ಸ್ಟಿಕ್ ಬೇಕಿಂಗ್ ಶೀಟ್ ಹಾಕಿ ಸೆಟ್ ಮಾಡಿ. ಬೆಂಡೆಕಾಯಿ ತೊಳೆದು ನೀರಿನಾಂಶ ಇಲ್ಲದಂತೆ ಒರೆಸಿ. ನಂತರ ಅದನ್ನು ಉದ್ದವಾಗಿ ಸೀಳಿ. ಒಂದು ಬೌಲ್ನಲ್ಲಿ ಹಾಕಿ. ಈಗ ಬೌಲ್ ಮಸಾಲೆ ಸಾಮಗ್ರಿ ಹಾಕಿ (ಎಣ್ಣೆ ಮತ್ತು ಉಪ್ಪು ಬಿಟ್ಟು) ಬೆಂಡೆಕಾಯಿಯನ್ನು ಉಳಿದ ಮಸಾಲೆ ಪುಡಿಗಳ ಜೊತೆ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದರ ಮೇಲೆ ಎಣ್ಣೆ ಹಾಕಿ ಮಿಕ್ಸ್ ಮಾಡಿ. ಈಗ ಬೆಂಡೆಕಾಯಿಯನ್ನು ಬೇಕಿಂಗ್ ಟ್ರೇ ಮೇಲೆ ಹರಡಿ. 20 ನಿಮಿಷ ಓವೆನ್ನಲ್ಲಿಡಿ ಬಂಡೇಕಾಯಿ (ಕಂದು) ಬಣ್ಣಕ್ಕೆ ತಿರುಗಿದ ಬಳಿಕ ಓವನ್ನಿಂದ ತೆಗೆದು ಉಪ್ಪನ್ನು ಉದುರಿಸಿ, ಬಿಸಿ ಬಿಸಿಯಾಗಿ ಸರ್ವ್ ಮಾಡಿ.