ಚಿಕ್ಕೋಡಿ, ಹೊಸದಿಗಂತ ವರದಿ
ಹಣ ಇದ್ದರೆ ಹಣವಂತ, ಗುಣ ಇದ್ದರೆ ಗುಣವಂತ, ರೂಪವಿದ್ದರೆ ರೂಪವಂತ, ಲಿಂದ ಇದ್ದರೆ ಲಿಂಗವಂತ. ದೇಹಕ್ಕೆ ಶಿವನ ಸಂಭಂದ ಬೆಳೆಸುವ ಸಂಸ್ಕಾರ ನೀಡುವದೇ ಲಿಂಗ ದೀಕ್ಷೆ. ಆ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ತೊಟ್ಟು ಲಿಂಗದೀಕ್ಷೆ ಪಡೆಯಿರಿ. ಸಂಕಲ್ಪದಿಂದ ಪುಜೆ ಸಂಪನ್ನಗೊಳ್ಳಲು ಸಾಧ್ಯ ಎಂದು ಕಬ್ಬುರ ಗೌರಿಶಂಕರ ಮಹಾಸ್ವಾಮಿಗಳು ನುಡಿದರು.
ಬಸವ ಜಯಂತಿ ನಿಮಿತ್ಯ ಚಿಕ್ಕೋಡಿ ಪಟ್ಟಣದ ಚರಮೂರ್ತಿ ಮಠದಲ್ಲಿ ನಡೆದ ಅಯ್ಯಾಚಾರ ಹಾಗು ಲಿಂಗದೀಕ್ಷೆ ಕಾರ್ಯಕ್ರಮ ದಲ್ಲಿ ಮಕ್ಕಳಿಗೆ ಲಿಂಗದೀಕ್ಷೆ ನೀಡಿ ಮಾತನಾಡಿದ ಅವರು,ನ್ಯಾಯ, ನೀತಿ, ಧರ್ಮ ದೊಂದಿಗೆ ತಾಯ ತಂದೆಯ ನಿಷ್ಠೆಯಿಂದ ನಡೆದು ನನ್ನ ದೇಶಕ್ಕೆ ಕೀರ್ತಿ ತರುತ್ತೇನೆ. ಬಸವ ಮಾರ್ಗದಲ್ಲಿ ನಡೆಯುತ್ತೇನೆ ಎಂದು ಸಂಕಲ್ಪ ಮಾಡಿ ಎಂದು ಮಕ್ಕಳಿಗೆ ಪ್ರಮಾನ ವಚನ ಭೊದಿಸಿದರು.
ಓಂ ಮಂತ್ರ ಪಠಣದಿಂದ ಲಿಂಗ ದಿಕ್ಷೇ ಕಾರ್ಯಕ್ರಮ ಆರಂಭಗೊಂಡು ಹಲವು ಮಕ್ಕಳು ಸಂಕಲ್ಪದೊಂದಿಗೆ ವೀರಶೈವ ಲಿಂಗಾಯತಧರ್ಮದ ಲಿಂಗ ದೀಕ್ಷೆ ಪಡೆದರು.
ಶ್ರೀ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು, ಶ್ರಿ ಪ್ರಸನ್ ಶಾಸ್ತ್ರೀ, ಶ್ರೀ ತಹಶಿಲ್ದಾರ ಶಾಸ್ತ್ರಿ , ಶ್ರೀ ಸಂತೋಷ ಶಾಸ್ತ್ರಿ ಸೇರಿ ಹಲವರು ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ