ಬಾಟಲಿಗಳಲ್ಲಿದ್ದ ಮಾದಕ ದ್ರವ್ಯ ವಶಕ್ಕೆ ಪಡೆದ ಬಿಎಸ್‌ಎಫ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್‌ ಗಡಿಯ ಬಳಿ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ತುಂಬಿಕೊಂಡಿದ್ದ ಮಾದಕ ದ್ರವ್ಯವನ್ನು ಗಡಿ ರಕ್ಷಣಾ ಪಡೆ (ಬಿಎಸ್‌ಎಫ್)‌ ವಶ ಪಡಿಸಿಕೊಂಡಿದೆ.

ಪಂಜಾಬ್‌ ನ ಅಭೊಹಾರ್‌ ಸೆಕ್ಟರ್‌ನಲ್ಲಿ ಗಡಿ ರಕ್ಷಣಾ ಪಡೆಗಳು ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಜೋಧ್‌ ವಾಲಾ ಹಳ್ಳಿಯ ಗಡಿ ಬೇಲಿಯ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಕುಳಿತ್ತಿರುವುದು ಕಂಡು ಬಂದಿದೆ. ತಕ್ಷಣವೇ ರಕ್ಷಣಾ ಪಡೆಗಳು ಆತನ್ನು ಪ್ರಶ್ನಿಸಿವೆ. ಈ ಸಂದರ್ಭದಲ್ಲಿ ಹತ್ತಿರದಲ್ಲಿದ್ದ ಬೈಕ್‌ ಬಳಸಿ ಗಡಿಗೆ ತಾಗಿಕೊಂಡಿದ್ದ ಸಂಪರ್ಕ ರಸ್ತೆಯ ಮೂಲಕ ಶಂಕಿತ ಪರಾರಿಯಾಗಿದ್ದಾನೆ.

ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಎರಡು ಹಸಿರು ಬಣ್ಣದ ಪ್ಲಾಸ್ಟಿಕ್‌ ಬಾಟಲಿಗಳು ಪತ್ತೆಯಾಗಿವೆ. ಇದರೊಲಗೆ ಪೂರ್ತಿಯಾಗಿ ಹೆರಾಯಿನ್‌ ತುಂಬಿಕೊಂಡಿರುವುದನ್ನು ಖಚಿತಪಡಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!