ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದ್ಯಾವುದೋ ಇಸ್ರೋ, ನಾಸಾದ ಉಪಗ್ರಹಗಳು ತೆಗೆದಿರುವ ಅನ್ಯಗ್ರಹದ ಚಿತ್ರಗಳಲ್ಲ. ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದ ದೃಶ್ಯಗಳಿವು. ಈ ಪ್ರಾಚೀನ ಅರಣ್ಯ ಪ್ರದೇಶ ಈಗ ಈ ಪರಿಯಲ್ಲಿ ಸಖತ್ ‘ಮಿಂಚು’ತ್ತಿದೆ!
ಇದಕ್ಕೆ ಕಾರಣವಾಗಿರುವುದು ಕೋಟಿ ಸಂಖ್ಯೆಯಲ್ಲಿ ಜೊತೆಯಾಗಿರುವ ಮಿಂಚುಹುಳಗಳು. ಈ ನಯನ ಮನೋಹರ ದೃಶ್ಯ ಕಾಣಿಸಿದ್ದು ಐಎಫ್ಎಸ್ ಅಧಿಕಾರಿ ರಾಮಸುಬ್ರಮಣ್ಯಂ ಅವರ ನಿರ್ದೇಶನದಲ್ಲಿ ಉಪನಿರ್ದೇಶಕರಾದ ಎಂ.ಜಿ. ಗಣೇಶನ್, ಸಾಫ್ಟ್ವೇರ್ ಇಂಜಿನಿಯರ್ ಶ್ರೀರಾಮ್ ಮುರಳಿ ಅವರು ಮಿಂಚುಹುಳುಗಳ ಚಟುವಟಿಕೆ ವೀಕ್ಷಿಸಲು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ. ಇಲ್ಲಿ ಜೊತೆಯಾಗುವ ಮಿಂಚುಹುಳುಗಳು ಕಾಡಿನಾದ್ಯಂತ ತಮ್ಮ ಮಿಂಚು ಹರಿಸಿ ಹೊಸ ಲೋಕವನ್ನೇ ಸೃಷ್ಟಿಸುತ್ತಿದೆ. ಇಡೀ ಕಾಡು ಈ ಮಿಂಚಿನಿಂದ ಹಳದಿ, ಹಸಿರಿನಲ್ಲಿ ಕಂಗೊಳಿಸುತ್ತವೆ.
ಕೆಲ ವರ್ಷಗಳ ಹಿಂದೆ ಜಗತ್ತಿನೆಲ್ಲೆಡೆ ಬಿಡುಗಡೆಯಾಗಿ ಸದ್ದು ಮಾಡಿದ ‘ಅವತಾರ್’ ಚಿತ್ರದ ‘ಬಯೋಲ್ಯೂಮಿನೆಸೆಂಟ್ ವರ್ಲ್ಡ್ ಪಂಡೋರಾ’ ಎಂಬುದು ಕಾಲ್ಪನಿಕವಾಗಿರಬಹುದು. ಆದರೆ, ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾತ್ರ ಇದು ನಿಜವಾಗಿದೆ!.