ನೇಪಾಳ ʼನೈಟ್‌ ಪಾರ್ಟಿʼಯಲ್ಲಿ ರಾಹುಲ್‌ ಜೊತೆಗಿದ್ದ ಹುಡುಗಿ ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ನೇಪಾಳದ ಪ್ರಖ್ಯಾತ ಲಾರ್ಡ್ ಆಫ್ ಡ್ರಿಂಕ್ಸ್ ನೈಟ್‌ಕ್ಲಬ್‌ನಲ್ಲಿ ಯುವತಿಯೊಬ್ಬರ ಜೊತೆಗೆ ಕಾಣಿಸಿಕೊಂಡಿದ್ದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ಮೀಮ್ಸ್‌ ಗಳನ್ನು ಹುಟ್ಟುಹಾಕಿ ಕಾಂಗ್ರೆಸ್‌ ʼಯುವರಾಜʼ ರಾಹುಲ್‌ ಗಾಂಧಿಯ ಕಾಲೆಳೆದಿದ್ದರು. ಇದರೊಂದಿಗೆ ರಾಹುಲ್‌ ಜೊತೆಗೆ ಇದ್ದ ʼಮಿಸ್ಟರಿ ಗರ್ಲ್‌ʼ ಯಾರಪ್ಪಾ ಎಂದು ಬಹಳಷ್ಟು ಮಂದಿ ತಲೆಕೆಡಿಸಿಕೊಂಡಿದ್ದರು. ಆ ಯುವತಿ ಯಾರು ಎಂಬುದನ್ನ ತಿಳಿದುಕೊಳ್ಳಲು ಗೂಗಲ್‌ ಮಾಡಿದವರ ಸಂಖ್ಯೆಗೇನು ಕಮ್ಮಿಯಿಲ್ಲ.
ರಾಹುಲ್ ಜೊತೆಗಿದ್ದಾಕೆ ನೇಪಾಳದ ಚೀನಾ ರಾಯಭಾರಿ ಹೌ ಯಾಂಕಿ ಎಂದು ಕೆಲ ಭಾರತೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದೀಗ ಆಕೆಯ ಮೂಲದ ಬಗ್ಗೆ ಮಾಹಿತಿಗಳು ಹೊರಬಿದ್ದಿವೆ. ನೇಪಾಳದ ಅತಿದೊಡ್ಡ ಪತ್ರಿಕೆಯಾದ ಕಾಂತಿಪುರ್ ನ್ಯಾಷನಲ್ ಡೈಲಿ ಈ ಬಗ್ಗೆ ವರದಿ ಮಾಡಿದ್ದು, ಯುವತಿಯು ಭಾರತೀಯ ಮೂಲದ ಪೋರ್ಚುಗೀಸ್ ನಾಗರಿಕಳಾಗಿದ್ದು, ಸದ್ಯ, ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿಸಿದೆ.

ಸೋಮವಾರ ರಾತ್ರಿ ರಾಹುಲ್‌ ಗಾಂಧಿ ನೈಟ್‌ ಕ್ಲಬ್‌ ನಲ್ಲಿ ಕಾಣಿಸಿಕೊಂಡಿದ್ದು ದೇಶದಲ್ಲಿ ಭಾರೀ ಟೀಕೆಗೆ, ನಗೆಪಾಟಲಿಗೆ ಗುರಿಯಾಗಿತ್ತು. ವೈರಲ್‌ ಆಗಿದ್ದ 12 ಸೆಕೆಂಡುಗಳ ವಿಡಿಯೋ ನೋಡಿದ ಮಂದಿ ಬಗೆಬಗೆಯಾಗಿ ಕಾಮೆಂಟ್‌ ಮಾಡಿದ್ದರು. “ದೇಶದಲ್ಲಿ ಸಂಕಷ್ಟವಿದೆ ಎಂದು ಡೋಲು ಬಡಿದು ರಾಹುಲ್‌ ವಿದೇಶದಲ್ಲಿ ಆ ತಾಳಕ್ಕೆ ಕುಣಿಯುತ್ತಿದ್ದಾರೆ, “ಜೋರಾಗಿ(ಪಕ್ಷ ಸೋಲಲು) ಕೆಲಸ ಮಾಡಿ, ಆಮೇಲೆ ಇನ್ನೂ ಜೋರಾಗಿ ಪಾರ್ಟಿಮಾಡಿ” – “ಇದು ಶ್ರೀಮಂತ ಮಕ್ಕಳ ಜೀವನ” ಎಂಬಿತ್ಯಾದಿ ಟ್ವೀಟ್‌ ಗಳನ್ನು ಮಾಡುವ ಮೂಲಕ  ರಾಹುಲ್‌ ಗಾಂಧಿಯ ಕಾಲೆಳೆಯಲಾಗಿತ್ತು. ಅಲ್ಲದೇ ಈ ಬಗ್ಗೆ ತೀಕ್ಷವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್‌ ನಖ್ವಿ “ರಾಹುಲ್ ಖಾಯಂ ಪ್ರವಾಸಿಗ ಮತ್ತು ಪಾರ್ಟ್‌ ಟೈಂ ರಾಜಕಾರಣಿ” ಎಂದು ಲೇವಡಿ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!