ಬಾಲಿಯ ಪವಿತ್ರ ವೃಕ್ಷಕ್ಕೊರಗಿ ನಗ್ನ ಚಿತ್ರ ತೆಗೆಸಿಕೊಂಡ ರಷ್ಯಾ ಯುವತಿಗೆ ಸಂಕಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡೋನೇಷ್ಯಾದ ಬಾಲಿಯ ದೇವಸ್ಥಾನವೊಂದರಲ್ಲಿರುವ 700 ವರ್ಷಗಳಷ್ಟು ಹಳೆಯದಾದ ಪವಿತ್ರ ವೃಕ್ಷಕ್ಕೊರಗಿ ಸಂಪೂರ್ಣ ಬೆತ್ತಲಾಗಿ ಫೋಟೋ ತೆಗಿಸಿಕೊಂಡ ರಷ್ಯಾದ ಯುವತಿಯೊಬ್ಬಳು ಸಂಕಷ್ಟಕ್ಕೆ ಸಿಲುಕಿದ್ದಾಳೆ.
ರಷ್ಯಾದ ಇಸ್ಟಾಗ್ರಾಮ್‌ ಸ್ಟಾರ್ ಅಲೀನಾ ಫಜ್ಲೀವಾ ಇತ್ತೀಚೆಗೆ ತನ್ನ ಗೆಳೆಯನ ಜೊತೆಗೆ ಬಾಲಿಯ ತಬಾನಮ್‌ನ ಬಾಬಕನ್ ದೇವಾಲಯಕ್ಕೆ ಭೇಟಿ ನೀಡಿದ್ದಳು. ಈ ವೇಳೆ ಅಲ್ಲೇ ಪಕ್ಕದಲ್ಲಿರುವ 700 ವರ್ಷ ಹಳೆಯದಾದ ಪ್ರಾಚೀನ ಪುರಾತನ ವೃಕ್ಷಕ್ಕೆ ಒರಗಿ ಬೆತ್ತಲೆ ಫೋಟೋಗಳನ್ನು ತೆಗೆಸಿಕೊಂಡಿದ್ದಳು. ಆ ಫೋಟೋಗಳನ್ನು ಇನ್ಸ್ಟಾಗ್ರಾಮ್‌ ನಲ್ಲೂ ಹರಿಬಿಟ್ಟಿದ್ದಳು. ಈ ಪೋಟೋಗಳು ಬಾರೀ ವೈರಲ್‌ ಆಗಿತ್ತು. ಆಕೆಗೆ ಇನ್ಸ್ಟಾದಲ್ಲಿ 16,000 ಕ್ಕೂ ಹೆಚ್ಚು ಫಾಲೋವರ್ಸ್‌ ಗಳಿದ್ದಾರೆ.
ಆಕೆಯ ಫೋಟೋಗಳನ್ನು ನೋಡಿದ ಬಾಲಿಯ ಜನ ತೀವ್ರ ಆಕ್ರೋಶಗೊಂಡಿದ್ದರು. ತಮ್ಮ ಪವಿತ್ರ ವೃಕ್ಷದ ಮುಂದೆ ಅಶ್ಲೀಲ ಫೋಟೋಗಳನ್ನು ತೆಗೆಸಿಕೊಂಡ ಯುವತಿಯನ್ನು ಬಂಧಿಸಲು ಆಗ್ರಹಿಸಿದ್ದರು. ಆಕ್ರೋಶಗಳು ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡ ಫಜ್ಲೀವಾ ಜನರ ಕ್ಷಮೆಯಾಚಿಸಿದ್ದಾಳೆ. ಘಟನೆಯ ಬಗ್ಗೆ ತುಂಬಾ ಮುಜುಗರಕ್ಕೊಳಗಾಗಿದ್ದೇನೆ. ಈ ಸ್ಥಳದ ಬಗ್ಗೆ ಸಂಪೂರ್ಣವಾಗಿ ತಿಳಿದಿರಲ್ಲ. ನಾನು ಮರದ ಕೆಳಗೆ ಪ್ರಾರ್ಥಿಸಿ ಪೋಟೋ ತೆಗೆಸಿಕೊಂಡೆ. ಈ ಕೃತ್ಯಕ್ಕೆ ಇಂಡೋನೇಷ್ಯದ ಜನರ ಕ್ಷಮೆಯಾಚಿಸುವುದಾಗಿ ಆಕೆ ಹೇಳಿದ್ದಳು. ಸದ್ಯ ಬಾಲಿ ಪೊಲೀಸರು ಯುವತಿಯನ್ನು ಬಂಧಿಸಿದ್ದು, ಆಕೆಯ ಅಪರಾಧಕ್ಕೆ ಆರು ವರ್ಷಗಳ ಜೈಲು ಶಿಕ್ಷೆ ಮತ್ತ 78,000 ಸಾವಿರ ದಂಡ ವಿಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!