ಹೊಸದಿಗಂತ ಡಿಜಿಟಲ್ ಡೆಸ್ಕ್ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಗರಿಮೆಲ್ಲ ಸತ್ಯನಾರಾಯಣ (1893 – 1952) ಆಂಧ್ರಪ್ರದೇಶದ ಪ್ರಖ್ಯಾತ ಕವಿ ಮತ್ತು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ.
ಸತ್ಯನಾರಾಯಣ ಗರಿಮೆಲ್ಲ ತಮ್ಮ ದೇಶಭಕ್ತಿ ಗೀತೆಗಳು ಮತ್ತು ಬರಹಗಳ ಮೂಲಕ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಊದಿ ಸ್ವಾತಂತ್ರ್ಯ ಹೋರಾಟಕ್ಕೆ ಆಂಧ್ರ ಜನರನ್ನು ಸಜ್ಜುಗೊಳಿಸಿದ ಮಹಾನ್ ರಾಷ್ಟ್ರೀಯತಾವಾದಿ. ಇದಕ್ಕಾಗಿ ಅವರು ಬ್ರಿಟಿಷ್ ಸರ್ಕಾರದಿಂದ ಹಲವಾರು ಜೈಲುಪಾಲಾಗಿದ್ದರು. ಸತ್ಯನಾರಾಯಣ ಅವರು 1893 ರಲ್ಲಿ ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟ ತಾಲೂಕಿನ ಗೋನೆಪಾಡು ಗ್ರಾಮದಲ್ಲಿ ವೆಂಕಟನರಸಿಂಹಂ ಮತ್ತು ಸೂರಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು, ಆದರೆ ದೇಹದಲ್ಲಿ ದೇಶಭಕ್ತಿ ತುಂಬಿ ತುಳುಕುವಷ್ಟಿತ್ತು.
ಅಧ್ಯಯನದ ನಂತರ ಗಂಜಾಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ಗುಮಾಸ್ತರಾಗಿ ಮತ್ತು ವಿಜಯನಗರದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಲು ಮಹಾತ್ಮಾ ಗಾಂಧಿಯವರ ಕರೆಯಿಂದ ಅವರು ತಮ್ಮ ಅಧ್ಯಯನವನ್ನು ತ್ಯಜಿಸಿದರು. ಈ ಸಮಯದಲ್ಲಿ, ಅವರು ತಮ್ಮ ಪ್ರಸಿದ್ಧ ಹಾಡು ಮಾಕೊಡ್ಡೀ ತೆಳ್ಳದೊರತನಮು ಬರೆದರು, ಇದಕ್ಕಾಗಿ ಅವರು 1922 ರಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾದ ನಂತರ ಹಳ್ಳಿಹಳ್ಳಿಗಳಲ್ಲಿ ಹಾಡುಗಳನ್ನು ಹಾಡುತ್ತಾ ಚಳವಳಿಯಲ್ಲಿ ಭಾಗವಹಿಸುವುದನ್ನು ಮುಂದುವರೆಸಿದರು. ಅವರು ಜಾತಿ ತಾರತಮ್ಯದ ವಿರುದ್ಧ ಮತ್ತು ಮಹಿಳೆಯರ ಹಕ್ಕುಗಳಿಗಾಗಿಯೂ ಹೋರಾಡಿದರು.
ಗರಿಮೆಲ್ಲ ಸತ್ಯನಾರಾಯಣ ರಚನೆಯ ಪ್ರಸಿದ್ಧ ಹಾಡು “ಮಾಕೊದ್ದೀ ಬಿಳಿ ದೊರತನ” (ನಮಗೆ ಈ ಬಿಳಿಯರ ಆಳ್ವಿಕೆ ಅಗತ್ಯವಿಲ್ಲ) ದೇಶಪ್ರೇಮಿಗಳಲ್ಲಿ ಸಂಚಲನ ಹುಟ್ಟುಹಾಕಿತು. ಈ ಹಾಡು ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಆಂಧ್ರಪ್ರದೇಶದ ಮನೆಗಳಲ್ಲಿ ಜನಪ್ರಿಯವಾಗಿತ್ತು.ಆಂಧ್ರದ ಜನರು ಅವರ ಪ್ರತಿಭೆಯಿಂದ ಪ್ರೇರಿತರಾಗಿದ್ದರು ಮತ್ತು ಅವರು ಮಹಾನ್ ದೇಶಭಕ್ತರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು. ಇದಕ್ಕಾಗಿ ಅವರಿಗೆ ಎರಡೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. ಸತ್ಯನಾರಾಯಣ ಬಡವರಾಗಿದ್ದರೂ ತಮ್ಮೆಲ್ಲಾ ಸಂಪತ್ತನ್ನು ರಾಷ್ಟ್ರಕ್ಕಾಗಿ ಅರ್ಪಣೆ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಆಹಾರ ಕಲ್ಪಿಸಲು ಬಳಸಿದರು. ಅವರು ಜೈಲಿನಲ್ಲಿದ್ದಾಗ ಅವರ ಸಂಪೂರ್ಣ ಕುಟುಂಬ (ಹೆಂಡತಿ, ತಂದೆ ಮತ್ತು ಅಜ್ಜ) ನಿಧನರಾದರು. ದುರಂತವೆಂದರೆ ಜೈಲಿನಿಂದ ಬಿಡುಗಡೆಯಾದ ಸತ್ಯನಾರಾಯಣ ಕುಟುಂಬವಿಲ್ಲದೆ, ಹಣವಿಲ್ಲದೆ ತೀವ್ರ ಬಡತನದಲ್ಲಿ ಡಿಸೆಂಬರ್ 18, 1952 ರಂದು ನಿಧನರಾದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ