ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ಆಚಾರ್ಯ ಸಿನಿಮಾ ಅಮೇಜಾನ್ ಪ್ರೈಮ್ ಗೆ ಲಗ್ಗೆ ಇಡ್ತಿದೆ.
ಏಪ್ರಿಲ್ 26ರಂದು ತೆರೆಗೆ ಬಂದ ಆಚಾರ್ಯ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ.ಈ ಹಿನ್ನೆಲೆ ಇದೀಗ ಅಮೇಜಾನ್ ನಲ್ಲಿ ರಿಲೀಸ್ ಆಗ್ತಿದೆ.
ಒಂದು ವಾರ ಕಳೆದ್ರೂ 80 ಕೋಟಿ ಕಲೆಕ್ಷನ್ ಮಾಡಲು ಸಿನಿಮಾ ವಿಫಲವಾಗಿದೆ. ಹೀಗಾಗಿ ಧಿಡೀರ್ ಅಂತಾ ಆಚಾರ್ಯ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಮಾಡಲಾಗ್ತಿದೆ.
ಮೇ 20ರಂದು ಅಮೇಜಾನ್ ನಲ್ಲಿ ರಿಲೀಸ್ ಆಗ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ದಿನ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆರ್ ಆರ್ ಆರ್ ಜೀ5 ಒಟಿಟಿಯಲ್ಲಿ ರಿಲೀಸ್ ಆಗ್ತಿದೆ.
ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆಕ್ಷನ್ ಸಿನಿಮಾ ಆಚಾರ್ಯದಲ್ಲಿ ಪೂಜಾ ಹೆಗ್ಡೆ, ಸೋನು ಸೂದ್ ಸೇರಿದಂತೆ ದೊಡ್ಡ ತಾರಾಬಳಗ ನಟಿಸಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ