ಎಬಿವಿಪಿ ವತಿಯಿಂದ ಕಲಬುರಗಿಯಲ್ಲಿ ಮೇ25ರಿಂದ ಉಚಿತ ಸಿಇಟಿ, ನೀಟ್‌ ತರಬೇತಿ

ಹೊಸದಿಗಂತ ವರದಿ ಕಲುಬುರಗಿ: 

ಪ್ರತಿವರ್ಷದಂತೆ ಈ ವರ್ಷವೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ  ಮೇ 25 ರಿಂದ ಜೂನ್ 15 ರ ವರೆಗೆ ನಗರದ ಜ್ಞಾನ ಸಿಂಚನ ಪದವಿ ಪೂರ್ವ ಕಾಲೇಜಿನಲ್ಲಿ ಕಲಬುರಗಿ ವಿಭಾಗದ ಬೀದರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ದ್ವೀತಿಯ ಪಿಯುಸಿಯ ವಿಜ್ಞಾನ ವಿಭಾಗದ ಬಡ ವಿದ್ಯಾರ್ಥಿಗಳಿಗೆ  ಅನುಕೂಲವಾಗುವ ನಿಟ್ಟಿನಲ್ಲಿ ಸಿಇಟಿ  ಮತ್ತು ನೀಟ್ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಎಬಿವಿಪಿ ನಗರ ಘಟಕ ಅಧ್ಯಕ್ಷ ಬಸಂತಗೌಡ ಪಾಟೀಲ್ ತಿಳಿಸಿದರು .

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ನಗರದ ಉತ್ತಮ ಗುಣಮಟ್ಟದ ಪ್ರತಿಷ್ಠಿತ ಕಾಲೇಜುಗಳಾದ ಚಂದ್ರಕಾಂತ ಪಾಟೀಲ್ ಕಾಲೇಜು, ಶ್ರೀಗುರು ಕಾಲೇಜು, ದಿಶಾ ಕಾಲೇಜು ಹಾಗೂ ಎಸ್.ಬಿ.ಆರ್ ಕಾಲೇಜುಗಳು ಸೇರಿದಂತೆ ಹಲವು ಕಾಲೇಜುಗಳ ಉಪನ್ಯಾಸಕರು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಈ ಉಚಿತ ತರಬೇತಿಯಲ್ಲಿ ಭಾಗವಹಿಸಿ ವೃತಿಪರ ಕೋರ್ಸಗಳಿಗೆ ಪ್ರವೇಶ ಪಡೆಯಬೇಕೆಂದು ಅವರು  ಮನವಿ ಮಾಡಿದರು.

ತರಬೇತಿ ಕುರಿತು ಹೆಚ್ಚಿನ ಮಾಹಿತಿಗಾಗಿ- 7760225038, 9008255594, 7019540322 ಸಂಪರ್ಕಿಸಲು ಕೊರಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಅಬಿಷೇಕ ಬಾಳೆ, ರಾಜು ಭಾವಿಮನ ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!