ಬ್ರಿಟಿಷರು ನಿಷೇಧಿಸಿದ್ದ ಸ್ವಾತಂತ್ರವೀರ ಸಾರ್ವಕರ್‌ ಪುಸ್ತಕಗಳ ಮರು ಮುದ್ರಣಕ್ಕೆ ಮುಂದಾದ ಗೋವಾ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ರಾಷ್ಟ್ರದೃಷ್ಟ ವೀರ ಸಾವರ್ಕರ್‌ ರವರ ಎರಡು ಕೃತಿಗಳನ್ನು ಮರುಮುದ್ರಣ ಮಾಡಲು ಗೋವಾ ಸರ್ಕಾರ ಮುಂದಾಗಿದೆ. ವಿ.ವಿ. ಸಾರ್ವಕರ್‌ ರವರ 1857ಚೆ ಸ್ವಾತಂತ್ರ್ಯ ಸಮರ್‌ ಮತ್ತು ಗೋಮಾಂತಕ್‌ ಪುಸ್ತಕಗಳನ್ನು ಮರುಮುಂದ್ರಣ ಮಾಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಮೋದ ಸಾವಂತ್‌ “ಸಾರ್ವಕರ್‌ರವರು ಭಾರತದ ಸ್ವಾತಂತ್ರ್ಯಕ್ಕಾಗಿಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿ ಅತ್ಯಂತ ಕ್ರೂರ ಶಿಕ್ಷೆಯನ್ನು ಅನುಭವಿಸಿದ ಅಪ್ರತಿಮ ದೇಶಭಕ್ತರು. ಆದರೆ ಸ್ವಾತಂತ್ರ್ಯಾನಂತರ ಕೆಲವರು ಅವರ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅವರ ಮೇಲೆ ದ್ವೇಷದ ಭಾವನೆ ಮೂಡುವಂತೆ ಮಾಡಿದ್ದಾರೆ. ಇಂಥಹ ಅದ್ಭುತ ದೇಶ ಭಕ್ತನೊಬ್ಬನ ಜೀವನವನ್ನು ಒಪ್ಪಿಕೊಳ್ಳುವಲ್ಲಿ ಭಾರತೀಯರಾಗಿ ನಾವು ವಿಫಲರಾಗಿದ್ದೇವೆ. ನಮ್ಮ ದೇಶದಲ್ಲಿ ಪಾಶ್ಚಾತ್ಯರು ತೋರಿಸಿದ ಇತಿಹಾಸವನ್ನು ಬೋಧಿಸಲಾಗಿದೆ. ಅವರು ನಮ್ಮನ್ನು ಹಾವಾಡಿಗರ ದೇಶ ಎಂದು ಗೇಲಿ ಮಾಡುವುದನ್ನು ಪ್ರಶ್ನಿಸಿದವರ ಸಾಲಿನಲ್ಲಿ ವಿ.ವಿ.ಸಾರ್ವಕರ್‌ ಮೊದಲಿಗರು ” ಎಂದು ಹೇಳಿದರು.

1857ಚೆ ಸ್ವಾತಂತ್ರ್ಯ ಸಮರ್ ಪುಸ್ತಕದ ಕುರಿತು ಮಾತನಾಡಿದ ಅವರು “ಅನೇಕ ಯುವಕರಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದ ಈ ಪುಸ್ತಕವನ್ನುಬ್ರಿಟೀಷ್‌ ಪ್ರಭುತ್ವವು ನಿಷೇಧಿಸಿತ್ತು. ಅದೃಷ್ಟವಶಾತ್‌ ಈ ಪುಸ್ತಕದ ಒಂದು ಪ್ರತಿ ಗೋವಾದ ವ್ಯಕ್ತಿಯವರ ಬಳಿಯಿತ್ತು. ಇದನ್ನೇ ಈಗ ಮರುಮುದ್ರಣ ಮಾಡಲಾಗಿದೆ. ಈ ಪುಸ್ತಕಗಳನ್ನು ಗೋವಾದ ಎಲ್ಲಾ ಗ್ರಂಥಾಲಯಗಳಲ್ಲಿ ಪ್ರಸಾರ ಮಾಡಲಾಗುತ್ತದೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇತಿಹಾಸಕಾರ ವಿಕ್ರಮ್ ಸಂಪತ್ ಅವರ ಪುಸ್ತಕ ಸಾವರ್ಕರ್ (ಭಾಗ 2): ಎ ಕಂಟೆಸ್ಟೆಡ್ ಲೆಗಸಿ, 1924-1966 ಅನ್ನು ಬಿಡುಗಡೆ ಮಾಡಲಾಯಿತು. ಸಾವರ್ಕರ್ ಅವರ ಎರಡು ಪುಸ್ತಕಗಳ ಜೊತೆಗೆ ಸಂಪತ್ ಅವರ ಪುಸ್ತಕವನ್ನೂ ಗೋವಾದ ಗ್ರಂಥಾಲಯಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಸಾವಂತ್ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!