ಮೇಷ
ನಿಮಗಿಂದು ಅದೃಷ್ಟದ ದಿನ. ಕಾರ್ಯಸಾಫಲ್ಯ. ಕುಟುಂಬದಲ್ಲಿ ಶುಭ ಬೆಳವಣಿಗೆ. ಬಂಧು ಮಿತ್ರರೊಂದಿಗೆ ಕಾಲಕ್ಷೇಪ. ವೃತ್ತಿಯಲ್ಲಿ ಉನ್ನತಿ.
ವೃಷಭ
ನಿಮ್ಮ ಸಲಹೆಗಳಿಗೆ ಇಂದು ಯಾರೂ ಗಮನ ಕೊಡುವುದಿಲ್ಲ. ಸಲಹೆ ಸೂಚನೆ ಕೊಡಲು ಹೋಗದಿರಿ. ಮನೆಯಲ್ಲಿ ವಾಗ್ವಾದ ನಡೆಯಬಹುದು.
ಮಿಥುನ
ಹಲವಾರು ಬದ್ಧತೆಗಳನ್ನು ಇಂದು ನೀವು ಪೂರೈಸಬೇಕಾಗಿದೆ. ಅದರತ್ತ ಗಮನ ಕೊಡಿ. ಕುಟುಂಬಸ್ಥರು ಹಲವು ಬೇಡಿಕೆ ಸಲ್ಲಿಸುತ್ತಾರೆ. ಆರ್ಥಿಕ ಕೊರತೆ.
ಕಟಕ
ಮನಸ್ಸು ಹಾಳು ಮಾಡುವ ಪ್ರಸಂಗ ಉದ್ಭವಿಸಬಹುದು. ಅದಕ್ಕೆ ತಲೆ ಕೆಡಿಸದೆ ನಿಮ್ಮ ಕೆಲಸದ ಮೇಲೆ ಪೂರ್ಣ ಗಮನ ಕೊಡಿ. ಹಣದ ಒತ್ತಡ.
ಸಿಂಹ
ನಿಮ್ಮ ಇತ್ತೀಚಿನ ಕೆಲಸಗಳನ್ನು ಪರಾಮರ್ಶಿಸಿ. ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಿ. ಇಲ್ಲವಾದರೆ ಮುಂದಕ್ಕೆ ಸಮಸ್ಯೆ ಬಂದೀತು.
ಕನ್ಯಾ
ನಿಮ್ಮ ಉನ್ನತಿಗೆ ಇಂದು ಹಲವು ಅವಕಾಶಗಳು ದೊರಕುವುವು. ಅವನ್ನು ಸದುಪಯೋಗ ಮಾಡಿ ಕೊಳ್ಳಿ. ಆರೋಗ್ಯ ಸಮಸ್ಯೆ ಕಾಡಬಹುದು. ನಿರ್ಲಕ್ಷ್ಯ ಬೇಡ.
ತುಲಾ
ಇತರರು ಹೇಳುವ ಮಾತುಗಳಿಗೆಲ್ಲ ತಲೆಯಾಡಿಸದಿರಿ. ನಿಮ್ಮ ವಿವೇಚನೆಯನ್ನೂ ಬಳಸಿ ಕಾರ್ಯ ಕೈಗೊಳ್ಳಿ. ಆಪ್ತರ ಜತೆ ಜಗಳಕ್ಕೆ ಹೋಗದಿರಿ.
ವೃಶ್ಚಿಕ
ಮನಸ್ಸು ಹಲವು ವಿಷಯಗಳಲ್ಲಿ ಅಲೆದಾಡುತ್ತದೆ. ಹಾಗಾಗಿ ಕೆಲಸದಲ್ಲಿ ಏಕಾಗ್ರಚಿತ್ತತೆ ಮೂಡುವುದಿಲ್ಲ. ಆರ್ಥಿಕ ಒತ್ತಡ.
ಧನು
ಬಹುಕಾಲದ ನಿರೀಕ್ಷೆ ಕೈಗೂಡಬಹುದು. ಕುಟುಂಬದಲ್ಲಿ ಸಂತೋಷದ ಸನ್ನಿವೇಶ. ವೃತ್ತಿಯಲ್ಲಿನ ಒತ್ತಡ ಕಡಿಮೆಯಾಗುವುದು. ಆರ್ಥಿಕ ಲಾಭ.
ಮಕರ
ನಿಮ್ಮ ಏಳಿಗೆ ಬಯಸದ ವ್ಯಕ್ತಿಗಳು ನಿಮಗೆ ಕಿರಿಕಿರಿ ಸೃಷ್ಟಿಸಬಹುದು. ಅವರ ಯೋಜನೆಯ ಬಗ್ಗೆ ಎಚ್ಚರದಿಂದಿರಿ. ಸಂಘರ್ಷಕ್ಕೆ ಇಳಿಯುವುದು ಬೇಡ.
ಕುಂಭ
ಅವಶ್ಯವಿಲ್ಲದ ಕಾರ್ಯಕ್ಕೂ ಹಣ ವ್ಯಯಿಸುವಿರಿ. ಖರ್ಚು ನಿಯಂತ್ರಿಸಿ ಎಂದು ಗ್ರಹಗತಿ ತಿಳಿಸುತ್ತಿದೆ. ಮುಖ್ಯ ಕಾರ್ಯಕ್ಕೆ ಕೌಟುಂಬಿಕ ಸಹಕಾರ.
ಮೀನ
ಹೊಸ ವಿಷಯಗಳಿಗೆ ತುಡಿಯುತ್ತೀರಿ. ಆದರೆ ನಿಮ್ಮ ಜೇಬಿನಿಂದ ಹೆಚ್ಚು ಹಣ ವ್ಯಯವಾಗಲಿದೆ. ಮನೆಯಲ್ಲಿ ಹರ್ಷದ ವಾತಾವರಣ.