ಹೊಸದಿಗಂತ ಡಿಜಿಟಲ್ ಡೆಸ್ಕ್:
ʼಗೀತಾʼ ದೊರೆಸಾನಿಯಂತಹ ಧಾರಾವಾಹಿಗಳ ಮೂಲಕ ಕರ್ನಾಟಕದ ಜನತೆಗೆ ಚಿರಪರಿಚಿತವಾಗಿದ್ದ ಕಿರುತೆರೆ ನಟಿ ಚೇತನಾರಾಜ್ ಫ್ಯಾಟ್ ಫ್ರೀ ಚಿಕಿತ್ಸೆಯ ಅಡ್ಡ ಪರಿಣಾಮದಿಂದ ಸಾವನ್ನಪ್ಪಿದ್ದಾರೆ.
ಸೌಂದರ್ಯ ವರ್ಧನೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಫ್ಯಾಟ್ ಫ್ರೀ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ದಾಖಲಾಗಿದ್ದ ಅವರು ಚಿಕಿತ್ಸೆಯ ಸಂದರ್ಭದಲ್ಲಿ ಶ್ವಾಸಕೋಶದಲ್ಲಿ ಅನಗತ್ಯ ದ್ರವ ಶೇಖರಣೆಯಾದ ಪರಿಣಾಮ ಉಸಿರಾಡಲಾಗದೇ ಕೊನೆಯುಸಿರೆಳೆದಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಚೇತನಾ ರಾಜ್ ಪೋಷಕರು ದೂರು ನೀಡಿದ್ದಾರೆ.