ಭಿಕ್ಷೆ ಕೇಳುತ್ತಿದ್ದ ಸಾಧುವಿನ ಕೂದಲು ಕತ್ತರಿಸಿ ಕ್ರೌರ್ಯ ಮೆರೆದ ಪುಂಡರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತನ್ನ ಪಾಡಿಗೆ ತಾನು ಭಿಕ್ಷೆ ಕೇಳುತ್ತಿದ್ದ ಸಾಧುವಿಗೆ ಕಿರುಕುಳ ನೀಡಿದ್ದಲ್ಲದೇ ಆತನ ಕೂದಲು ಕತ್ತರಿಸಿ ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಖಾಂಡ್ವಾ ಕ್ಷೇತ್ರದಲ್ಲಿ ಈ ಘಡನೆ ನಡೆದಿದೆ ಎಂದು ವರದಿಯಾಗಿದೆ. ಸಂಜೆ ಹೊತ್ತಿನಲ್ಲಿ ಹೊಟ್ಟೆ ಪಾಡಿಗಾಗಿ ಭಿಕ್ಷೆ ಕೇಳುತ್ತಿದ್ದ ಸಾಧುವಿಗೆ ಪುಂಡರ ಗುಂಪೊಂದು ತೊಂದರೆ ಕೊಟ್ಟಿದ್ದಲ್ಲದೇ ಅತನ ತಲೆಯ ಕೂದಲನ್ನು ಕತ್ತರಿಸಿಲಾಗಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಅಗುತ್ತಿದ್ದಂತೆ ಪೋಲೀಸರು ಕ್ರಮ ಕೈಗೊಂಡಿದ್ದು ಕೂದಲು ಕತ್ತರಿಸಿದ ವ್ಯಕ್ತಿಯನ್ನು ಪ್ರವೀಣ್‌ ಗೌರ್‌ ಎಂದು ಗುರುತಿಸಲಾಗಿದ್ದು ಆತನನ್ನು ವಶಕ್ಕೆ ಪಡೆದು ಕೇಸ್‌ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!