ಹೊಸದಿಗಂತ ಡಿಜಿಟಲ್ ಡೆಸ್ಕ್
ರಂಗಪ್ರವೇಶಕ್ಕೂ ಮುನ್ನವೇ ಅಬ್ಬರ ಆರ್ಭಟದಿಂದ ಈ ಬಾರಿ ಭಾರೀ ನಿರೀಕ್ಷೆ ಮೂಡಿಸಿದ್ದ ಮುಂಗಾರು, ಆರಂಭದಲ್ಲಿಯೇ ದುರ್ಬಲವಾಗಿ ನಿರಾಸೆ ಮೂಡಿಸಿದೆ. ಇನ್ನೂ ಕೆಲವು ದಿನ ಮುಂಗಾರು ಚುರುಕುಗೊಳ್ಳುವ ಯಾವುದೇ ಸಾಧ್ಯತೆ ಇಲ್ಲವಾದರೂ, ರಾಜ್ಯದ ಹಲವೆಡೆಗಳಲ್ಲಿ ಮಾತ್ರ ಮಳೆ ಮುಂದುವರಿಯಲಿದೆ.
ಹೇಗೆ ವಾತಾ’ವರುಣ’?
ಮೇ 26ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆಯಂತೆ ಕಾಸರಗೋಡು, ಸುಳ್ಯ, ಪುತ್ತೂರು, ಸುಬ್ರಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಕಾರ್ಕಳ ಸುತ್ತಮುತ್ತ ಭಾಗಗಳಲ್ಲಿ, ಬೆಂಗಳೂರು, ಕೋಲಾರ, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಹಲವೆಡೆಗಳಲ್ಲಿ ಗುಡುಗು ಸಹಿತ ಮಳೆಯಾಗಮನದ ಸಾಧ್ಯತೆ ದಟ್ಟವಾಗಿದೆ.
ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ಗುಡುಗು ಸಹಿತ ತುಂತುರು ಮಳೆಯ ಸಾಧ್ಯತೆ ದಟ್ಟವಾಗಿದೆ.
ಇನ್ನು ದಕ್ಷಿಣ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಸಂಜೆಯ ವೇಳೆಗೆ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ಮಾಹಿತಿ: ಸಾಯಿಶೇಖರ್, ಕರಿಕಳ