ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಅರೇ..ಇದೇನು, ಪ್ರಶ್ನೆಗೆ ಉತ್ತರಿಸೋಕೆ ಇಷ್ಟೆಲ್ಲ ತಿಣುಕಾಡಬೇಕಿರೋನು ಪ್ರಧಾನಿ ಅಭ್ಯರ್ಥಿ ಆಗಬೇಕಾ?”, “ಗಾಪುಲ್ ಗಾಂಧಿಯವರ ಅವಯವಗಳ ಒಕ್ಕೂಟವು ಮಿದುಳಿನೊಂದಿಗೆ ಸಂಪರ್ಕ ತಪ್ಪಿಸಿಕೊಂಡಿದ್ದರಿಂದ ಹೀಗಾಯ್ತೆನಿಸುತ್ತದೆ”- ಇವೆಲ್ಲ ರಾಹುಲ್ ಗಾಂಧಿ ಲಂಡನ್ನಿನಲ್ಲಿ ನಡೆಸಿದ ಸಂವಾದವೊಂದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿರುವ ತಮಾಶೆಯ ಪ್ರತಿಕ್ರಿಯೆಗಳು.
ಹಿಂಸೆಯೊಂದಿಗೆ ಬದುಕುವುದು ಹೇಗೆ ಎಂದು ನಿಮ್ಮ ವೈಯಕ್ತಿಕ ಅನುಭವವನ್ನೂ ಜತೆಗಿರಿಸಿಕೊಂಡು ವ್ಯಾಖ್ಯಾನಿಸುವಿರಾ ಅಂತ ನಿರೂಪಕಿ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಬಹಳ ತಡಬಡಾಯಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಅವರು ಅಷ್ಟೆಲ್ಲ ಪ್ರಯಾಸಪಟ್ಟು ಉತ್ತರಿಸುವುದು ಬೇಡ ಎಂಬಂತೆ ಪ್ರೇಕ್ಷಕರು ಚಪ್ಪಾಳೆ ಹೊಡೆದಾಗ, ಇಲ್ಲ…ಇಲ್ಲ ನಾನು ಯೋಚಿಸ್ತಿದೀನಿ, ಹೇಳ್ತೀನಿ ತಡೀರಿ ಅಂತ ಮತ್ತೆ ಮಾತಿಗೆ ಪ್ರಯತ್ನಿಸಿದರು ರಾಹುಲ್ ಗಾಂಧಿ. ಅವರ ದೀರ್ಘ ಸಂವಾದದ ನಡುವಿನ ಈ ಒಂದು ಪ್ರಸಂಗವೇ ಸಾಮಾಜಿಕ ಮಾಧ್ಯಮದಲ್ಲಿ ಬಹುವಾಗಿ ಚರ್ಚೆಯಾಗುತ್ತಿದೆ.
ವೀಡಿಯೋ ಸ್ಟ್ರಕ್ ಆಗಿಲ್ಲ, ಇದು ರಾಹುಲ್ ಗಾಂಧಿ ಚಮತ್ಕಾರ#RahulGandhi #cambridge #interaction #hosadiganthaonline #hosadiganthadigital #hosadigantha pic.twitter.com/Q3rxnoGUbX
— Hosadigantha (@HosadiganthaWeb) May 25, 2022