ಎಲಿಮಿನೇಟರ್‌ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಆಘಾತ: ಸ್ಟಾರ್‌ ಪ್ಲೆಯರ್‌ಗೆ ಗಾಯ, ಲಖನೌ ವಿರುದ್ಧ ಕಣಕ್ಕಿಳಿಯುವುದು ಡೌಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಲ್ಲಿ ಇಂದು ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಅಧೃಷ್ಟವನ್ನು ಬೆನ್ನಿಗಿಟ್ಟುಕೊಂಡು ಪ್ಲೇ ಆಫ್‌ ಪ್ರವೇಶಿಸಿರುವ ಆರ್ಸಿಬಿ ಎಲಿಮಿನೇಟರ್‌ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ರೋಚಕ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದಲೇ ಹೊರಬೀಳಲಿದ್ದಾರೆ. ಗೆದ್ದವರು ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಡುವ ಅವಕಾಶ ಪಡೆಯಲಿದ್ದಾರೆ. ಆದ್ದರಿಂದ ಎರಡೂ ತಂಡಗಳು ಗೆಲುವನ್ನಷ್ಟೇ ಎದುರು ನೋಡುತ್ತಿವೆ.
ಈ ನಡುವೆ ಆರ್ಸಿಬಿ ತಂಡಕ್ಕೆ ಬಹುದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್‌ ಬೌಲರ್ ಹರ್ಷಲ್ ಪಟೇಲ್ ಗಾಯಕ್ಕೆ ತುತ್ತಾಗಿದ್ದಾರೆ. ಹರ್ಷಲ್ ಪಟೇಲ್‌ ಮೇ 22 ರಂದು ನಡೆದಿದ್ದ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಗಾಯಾಳುವಾಗಿದ್ದರು. ಶಾರ್ಟ್ ಎಕ್ಸ್‌ಟ್ರಾ ಕವರ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡು ಬಲಗೈಗೆ ಜೋರಾಗಿ ಬಡಿದು ತೀವ್ರಗಾಯವಾಗಿತ್ತು. ಆದ್ದರಿಂದ ಇಂದು ಲಕ್ನೋ ವಿರುದ್ಧದ ಮಹತ್ವದ ಪಂದ್ಯದಲ್ಲಿ ಹರ್ಷಲ್‌ ಪಟೇಲ್‌ ಕಣಕ್ಕಿಳಿಯುವ ಕುರಿತು ಯಾವುದೇ ಖಚಿತತೆ ಇಲ್ಲ. ಇದು ಆರ್ಸಿಬಿ ಪಾಳೆಯದಲ್ಲಿ ಆತಂಕ ಮೂಡಿಸಿದೆ.
ಒಂದೊಮ್ಮೆ ಹರ್ಷಲ್‌ ಇಂದಿನ ಪಂದ್ಯಕ್ಕೆ ಅಲಭ್ಯರಾದರೆ ಅವರ ಸ್ಥಾನದಲ್ಲಿ ಆಕಾಶ್ ದೀಪ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಈ ಪಂದ್ಯದಲ್ಲಿ ಸೋತರೆ ಹೊರಬೀಳುವುದರಿಂದ ಶೇ.90ರಷ್ಟು ಫಿಟ್‌ ಆಗಿದ್ದರೂ ಹರ್ಷಲ್‌ ರನ್ನು ಆಡಿಸಲು ಆರ್‌ಸಿಬಿ ಉತ್ಸುಕವಾಗಿದೆ.
ಈ ಬಗ್ಗೆ ಹರ್ಷಲ್‌ ಪಟೇಲ್‌ ಮಾತನಾಡಿದ್ದು, ನಿನ್ನೆ ಕೈ ಗಾಯಕ್ಕೆ ಹಾಕಲಾಗಿದ್ದ ಹೊಲಿಗೆಗಳನ್ನು ತೆಗೆದುಹಾಕಲಾಗಿದೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆಡಲು ಸಿದ್ಧವಾಗಿದ್ದೇನೆ ಎಂದಿರುವುದು ಅಭಿಮಾನಿಗಳಲ್ಲಿ ಕೊಂಚ ನಿರಾಳತೆ ಮೂಡಿಸಿದೆ.
ಈ ನಡುವೆ ಆರ್ಸಿ ಟ್ವಿಟರ್‌ ನಲ್ಲಿ ತನ್ನ ಆಟಗಾರರು ಅಭ್ಯಾಸ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದು, ಹರ್ಷಲ್‌ ಸಹ ಭಾಗಿಯಾಗಿದ್ದಾರೆ. ಆದರೂ ತಂಡ ಅವರು ಕಣಕ್ಕಿಳಿಯುವ ಕುರಿತಾಗಿ ಯಾವುದೇ ಅಪ್‌ ಡೇಟ್‌ ಗಳನ್ನು ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಹರ್ಷಲ್ ಈ ಪಂದ್ಯದಿಂದ ಹೊರಗುಳಿದರೆ ಆರ್ಸಿಬಿ ಬೌಲಿಂಗ್‌ ವಿಭಾಗಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಎಲ್‌ ಎಸ್‌ ಜಿ ಸಂಭಾವ್ಯ XI:
ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ಸಿ), ಎವಿನ್ ಲೂಯಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್

RCB ಸಂಭಾವ್ಯ XI:
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (c), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವನಿಂದು ಹಸರಂಗ ಹರ್ಷಲ್ ಪಟೇಲ್ / ಆಕಾಶ್ ದೀಪ್, ಸಿದ್ದಾರ್ಥ್ ಕೌಲ್ / ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!