ಬಾಲಯ್ಯ ಮುಂದಿನ ಸಿನಿಮಾದಲ್ಲಿ ಕನ್ನಡದ ಚೆಲುವೆಗೆ ಸ್ಥಾನ..!?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಖಂಡ ಚಿತ್ರದ ಮೂಲಕ ನಂದಮೂರಿ ಬಾಲಕೃಷ್ಣ ಮತ್ತೆ ಯಶಸ್ಸಿನ ಹಾದಿಗೆ ಮರಳಿರುವುದು ಗೊತ್ತೇ ಇದೆ. ಮಾಸ್ ಚಿತ್ರಗಳ ನಿರ್ದೇಶಕ ಬೋಯಪಾಟಿ ಶ್ರೀನು ತಮ್ಮದೇ ಆದ ಛಾಪು ಮೂಡಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ನಂದಮೂರಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಬಳಿಕ ಬಾಲಯ್ಯ ಯುವ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರ ನಿರ್ದೇಶನದಲ್ಲಿ ಹೊಸ ಚಿತ್ರವನ್ನು ಚಿತ್ರೀಕರಿಸುತ್ತಿದ್ದಾರೆ. ಎನ್‌ಬಿಕೆ 107 ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರವನ್ನು ಗೋಪಿಚಂದ್ ಆಕ್ಷನ್ ಎಂಟರ್‌ಟೈನರ್ ಚಿತ್ರವಾಗಿ ನಿರ್ದೇಶಿಸಲಿದ್ದಾರೆ.

ಈ ಚಿತ್ರ ಪೂರ್ಣಗೊಳ್ಳುವ ಮುನ್ನವೇ ಮತ್ತೊಬ್ಬ ಯುವ ನಿರ್ದೇಶಕ ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ಬಾಲಯ್ಯ ತಮ್ಮ ಮುಂದಿನ ಸಿನಿಮಾವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಅನಿಲ್ ರಾವಿಪುಡಿ ಶೀಘ್ರದಲ್ಲೇ ಈ ಚಿತ್ರವನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ಬಾಲಯ್ಯ ಎದುರು ನಾಯಕಿಯಾಗಿ ಪೆಲ್ಲಿಸಂದಡಿ ನಾಯಕಿ ಶ್ರೀಲೀಲಾ ನಟಿಸಲಿದ್ದಾರೆ ಎಂಬ ಸುದ್ದಿಗೆ ಬ್ರೇಕ್‌ ಹಾಕಿದ್ದಾರೆ. ಶ್ರೀಲೀಲಾ ನಾಯಕಿ ಅಲ್ಲ ಬಾಲಯ್ಯ ಮಗಳಾಗಿ ನಟಿಸಲಿದ್ದಾರೆ ಎಂದು ಅನಿಲ್‌ ರಾವಿಪುಡಿ ತಿಳಿಸಿದ್ದಾರೆ.

ಈ ಸಿನಿಮಾದಲ್ಲಿ ನಾಯಕಿಯಾಗಿ ಎಫ್3 ಬ್ಯೂಟಿ ಮೆಹ್ರೀನ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಚಿತ್ರದಲ್ಲಿ ಬಾಲಯ್ಯ 50ರ ಹರೆಯದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಎದುರು ಮೆಹ್ರೀನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಚಿತ್ರ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಚಿತ್ರದಲ್ಲಿ ಬಾಲಯ್ಯ ಅವರ ಪಾತ್ರ ತುಂಬಾ ಪವರ್ ಫುಲ್ ಆಗಿ ಮೂಡಿಬರಲಿದ್ದು, ಅಪ್ಪ, ಮಗಳ ಭಾವನೆಗಳ ಮೇಲೆ ಸಿನಿಮಾ ಪ್ರೇಕ್ಷಕರ ಮನಸೂರೆಗೊಳ್ಳಲಿದೆ ಎಂಬುದು ಚಿತ್ರರಂಗದ ಮಾತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!