ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿನ ಕಾಲದಲ್ಲಿ ನದಿ, ಬಾವಿ, ಕೆರೆ,ಕಲ್ಯಾಣಿಗಳು ಕುಡಿಯುವ ನೀರಿನ ಮೂಲಗಳಾಗಿದ್ದವು. ಕೆಲ ದಶಕಗಳ ಹಿಂದೆ ತಾಮ್ರದ ನಾಣ್ಯಗಳು ಚಲಾವಣೆಯಲ್ಲಿದ್ದವು. ತಾಮ್ರ ಮಿಶ್ರಿತ ನೀರು ಸೇವಿಸಿದ್ದಲ್ಲಿ ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ ನಾಣ್ಯಗಳನ್ನು ಕುಡಿಯುವ ನೀರಿಗೆ ಎಸೆಯವುದು ರೂಢಿಯಿತ್ತು. ಕೆಲ ದಿನಗಳ ಬಳಿಕ ದೇವರ ಹೆಸರಲ್ಲಿ ಕಲ್ಯಾಣಿಗಳಿಗೆ ನಾಣ್ಯ ಎಸೆಯುವ ಪದ್ದತಿ ಅನುಸರಿಸಿದರು. ಆದರೆ ಇದೀಗ ತಾಮ್ರದ ನಾಣ್ಯಗಳಿಲ್ಲದೆ ಅಲ್ಯೂಮಿನಿಯಂ ನಾಣ್ಯಗಳನ್ನೇ ಎಸೆಯುತ್ತಾರೆ. ಹಿಂದಿನಿಂದ ರೂಢಿಸಿಕೊಂಡಿರುವ ಪದ್ಧತಿಯನ್ನು ಬಿಡಲಾಗದೆ. ಇಂದಿಗೂ ಕಲ್ಯಾಣಿಗಳಿಗೆ ನಾಣ್ಯ ಎಸೆಯುತ್ತಾರೆ. ಆದರೆ ಆ ನೀರನ್ನು ಯಾರೂ ಈಗ ಬಳಕೆ ಮಾಡುವುದಿಲ್ಲ ಎಂಬುದು ಗಮನಿಸಬೇಕು.