ಮೇಷ
ವೈಯಕ್ತಿಕ ಬದುಕಿನಲ್ಲಿ ಏರುಪೇರು. ಮನಸ್ಸು ಕೆಡಿಸುವಂತಹ ಬೆಳವಣಿಗೆ. ಕೆಲವರ ವರ್ತನೆ ಅಸಹನೀಯ ಎನಿಸಬಹುದು. ತಾಳ್ಮೆಯಿರಲಿ.
ವೃಷಭ
ಭಾವನಾತ್ಮಕವಾಗಿ ಕೋಲಾಹಲದ ದಿನ. ಇತರರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂದು ಚಿಂತಿಸುವಿರಿ. ಎಲ್ಲರನ್ನು ಮೆಚ್ಚಿಸುವ ಯತ್ನ ಕೈಗೂಡದು.
ಮಿಥುನ
ನೀರಸ ದಿನ. ಉತ್ಸಾಹ ಹೆಚ್ಚಿಸುವ ಬೆಳವಣಿಗೆ ಸಂಭವಿಸದು. ಏಕತಾನತೆಯ ಕಾರ್ಯ ದಿಂದ ರೋಸುವಿರಿ. ಪ್ರಮುಖ ಕಾರ್ಯ ಇಂದೇ ಮುಗಿಸಿ.
ಕಟಕ
ಹಿತವೆಂದುಕೊಂಡ ಕೆಲವು ವಿಷಯಗಳು ಅಹಿತ ಎನ್ನಿಸಬಹುದು. ಆಪ್ತರೇ ನಿಮ್ಮಿಂದ ದೂರ ಆಗಬಹುದು. ನಿಮ್ಮ ವರ್ತನೆಯೂ ಅದಕ್ಕೆ ಕಾರಣವಾಗುತ್ತದೆ.
ಸಿಂಹ
ಇಂದು ನಿಮ್ಮ ಸುತ್ತಲಿರುವ ಎಲ್ಲರ ಜತೆಗೂ ಏಕಾಭಿಪ್ರಾಯ ಹೊಂದಿರುವಂತೆ ಕಾಣುತ್ತದೆ. ಅಭಿಪ್ರಾಯ ಭೇದ ಉಂಟಾಗದು. ಮನಸ್ಸು ನಿರಾಳ.
ಕನ್ಯಾ
ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳು ಹೆಚ್ಚು ಆಸಕ್ತಿ ಕೆರಳಿಸಬಹುದು. ಹಾಗೆಂದು ಲೌಕಿಕ ವಿಷಯ ಕಡೆಗಣಿಸಬೇಡಿ. ಕುಟುಂಬ, ಕರ್ತವ್ಯ ಮರೆಯಬೇಡಿ.
ತುಲಾ
ನಿಮ್ಮ ಪಾಲಿಗಿಂದು ತೃಪ್ತಿಕರ ದಿನ. ಆಪ್ತರೊಂದಿಗೆ ಸಮಾಲೋಚನೆ. ಕಾರ್ಯ ಸಾಫಲ್ಯ. ಕೌಟುಂಬಿಕ ಮನಸ್ತಾಪ ಅಂತ್ಯ, ಸಹಕಾರ ಹೆಚ್ಚಳ.
ವೃಶ್ಚಿಕ
ನಿರಾಳ ದಿನ. ಹೆಚ್ಚಿನ ಸಮಸ್ಯೆಗಳು ಕಾಡಲಾರವು. ಆಪ್ತರೊಂದಿಗಿನ ವಿರಸ ಶಮನ. ಕೌಟುಂಬಿಕ ಮತ್ತು ವೃತ್ತಿ ಕಾರ್ಯಗಳು ಸಲೀಸು.
ಧನು
ಪ್ರೀತಿಯ ಭಾವದಲ್ಲಿ ಮುಳುಗುವಿರಿ. ವ್ಯಕ್ತಿಯೊಬ್ಬರ ಆಕರ್ಷಣೆಗೆ ಒಳಗಾಗುವ ಸಾಧ್ಯತೆ. ಹಿತಮಿತ ಅರಿತು ವರ್ತಿಸಿರಿ.
ಮಕರ
ನಿಮಗಿಂತ ಮೇಲಿನವರು ನಿಮ್ಮ ಮೇಲೆ ಕೆಲವು ಹೊಣೆ ಹೇರಿಯಾರು. ಅದನ್ನೆಲ್ಲ ಸಮರ್ಥವಾಗಿ ನಿಭಾಯಿಸುವಿರಿ. ದಿನದಂತ್ಯಕ್ಕೆ ತೃಪ್ತಿಯ ಭಾವ.
ಕುಂಭ
ಎಲ್ಲ ಕಾರ್ಯಗಳು ಇಂದು ಸಲೀಸಾಗಿ ನಡೆಯುವವು. ಹೆಚ್ಚಿನ ಪ್ರಯತ್ನ ಪಡದೇ ಕಾರ್ಯಸಿದ್ಧಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.
ಮೀನ
ಮುಂಜಾನೆ ಸಮಸ್ಯೆಯಲ್ಲಿ ಮುಳುಗಿರುವಂತೆ ಅನಿಸಬಹುದು. ಆದರೆ ಅಪರಾಹ್ನ ಎಲ್ಲವೂ ನಿರಾಳ. ನಿಮಗೆ ಪೂರಕ ಬೆಳವಣಿಗೆಗಳು.