ಹೊಸದಿಗಂತ ಡಿಜಿಟಲ್ ಡೆಸ್ಕ್
ಸ್ಟೆಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟೂರ್ನಿಯ ಫೈನಲ್ನಲ್ಲಿ ಸ್ಪಾನಿಷ್ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರೀಡ್ ತಂಡ ದಾಖಲೆಯ 14 ನೇ ಬಾರಿಗೆ ಯುರೋಪಿಯನ್ ಟ್ರೋಫಿ ಗೆದ್ದು ಸಂಭ್ರಮಾಚರಿಸಿದೆ.
ಯುರೋಪಿಯನ್ ಹೆವಿವೇಯ್ಟ್ ತಂಡಗಳೆಂದೇ ಖ್ಯಾತವಾದ ಲಿವರ್ಪೂಲ್ ಹಾಗೂ ರಿಯಲ್ ಮ್ಯಾಡ್ರೀಡ್ ನಡುವಿನ ಪೈನಲ್ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಅದ್ಧೂರಿಯಾಗಿ ಆಯೋಜನೆಗೊಂಡಿದ್ದ ಪೈನಲ್ನಲ್ಲಿ ಎರಡೂ ತಂಡಗಳು ಜಿದ್ದಿಗೆ ಬಿದ್ದು ಸೆಣಸಾಡಿದವು. ಪಂದ್ಯದ 59 ನೇ ನಿಮಿಷದಲ್ಲಿ ಫೆಡರಿಕೋ ವಾಲ್ಟ್ರೇಡ್ ನೀಡಿದ ಪಾಸ್ ಅನ್ನು ಯಶಸ್ವಿಯಾಗಿ ಗೋಲುಪೆಟ್ಟಿಗೆಯೊಳಕ್ಕೆ ಸೇರಿಸಿದ ಬ್ರೆಜಿಲ್ ಮೂಲದ ಆಟಗಾರ ವಿಂಜೆರ್ ವಿನೀಶಿಯಸ್ ಜೂನಿಯರ್ ರಿಯಲ್ ಮ್ಯಾಡ್ರೀಡ್ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು. ಅಂತಿಮವಾಗಿ 1-0 ಗೋಲುಗಳಿಂದ ಲೀವರ್ ಪೂಲ್ ತಂಡವನ್ನು ಮಣಿಸಿದ ರಿಯಲ್ ಮ್ಯಾಡ್ರೀಡ್ 14 ನೇ ಯುರೋಪಿಯನ್ ಕಪ್ ಗೆದ್ದ ಸಾಧನೆ ಬರೆಯಿತು.
ಇದೇ ತಂಡಗಳು ಈ ಹಿಂದೆ 2018 ರ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದಾಗಲೂ ರಿಯಲ್ ಮ್ಯಾಡ್ರಿಡ್ ರೋಚಕ ಗೆಲುವು ಸಾಧಿಸಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ