ರೈಲ್ವೆ ನಿಲ್ದಾಣಕ್ಕೆ ಪಾಶ್ಚಿಮಾತ್ಯ ವಿನ್ಯಾಸ ಬೇಡ: ಸಚಿವರಿಗೆ ನಿರ್ದೇಶಕ ನಾಗ್‌ ಅಶ್ವಿನ್ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಮಲ ತಿರುಪತಿಯಲ್ಲಿ ಎಂತಹ ಪುಣ್ಯಕ್ಷೇತ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿನಿತ್ಯ ಲಕ್ಷಾಂತರ ಭಕ್ತರು ತಿಮ್ಮಪ್ಪನ ದರ್ಶನ ಪಡೆಯಲು ದೇಶ ವಿದೇಶಗಳಿಂದ ಬರುತ್ತಾರೆ. ಹಾಗಾಗಿ ತಿರುಪತಿ ರೈಲು ನಿಲ್ದಾಣ ಸದಾ ಬ್ಯುಸಿಯಿಂದ ಕೂಡಿರುತ್ತದೆ. ಈ ದಟ್ಟಣೆಯನ್ನು ನಿಭಾಯಿಸಲು ರೈಲ್ವೆ ನಿಲ್ದಾಣವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ತಿರುಪತಿ ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಯ ಮಟ್ಟಕ್ಕೇರಿಸಲು ಕೇಂದ್ರ ಸರ್ಕಾರ ವಿನ್ಯಾಸವನ್ನು ಪೂರ್ಣಗೊಳಿಸಿದೆ. ಈ ವಿನ್ಯಾಸವನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯದಲ್ಲೇ ತಿರುಪತಿ ರೈಲು ನಿಲ್ದಾಣ ವಿಶ್ವ ದರ್ಜೆಯ ಸಾಲಿನಲ್ಲಿರಲಿದೆ ಎಂದು ನಾಲ್ಕು ಫೋಟೋಗಳನ್ನು ಪೋಸ್ಟ್ ಮಾಡಿ ಕ್ಯಾಪ್ಷನ್‌ ನೀಡಿದ್ದಾರೆ. ಇವರ ಈ ಟ್ವೀಟ್‌ಗೆ ನೆಟ್ಟಿಗರು ನೆಗೆಟಿವ್‌ ಕಮೆಂಟ್‌ಗಳನ್ನು ಮಾಡುತ್ತಿದ್ದು, ಇದೀಗ ಸಚಿವರ ಟ್ವೀಟ್‌ಗೆ ಮಹಾನದಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಮನವಿ ಕೊಟ್ಟಿದ್ದಾರೆ.

ರೈಲ್ವೆ ಸಚಿವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ನಾಗ್ ಅಶ್ವಿನ್, “ಡಿಯಯರ್ ಸರ್.. ನಿಮ್ಮ ಟ್ವೀಟ್‌ನ ಕೆಳಗಿರುವ ಕಮೆಂಟ್‌ಗಳನ್ನು ನೋಡಿದರೆ ಈಗಾಗಲೇ ನಿಮಗೆ ಅರ್ಥವಾಗಿರುತ್ತದೆ. ರೈಲ್ವೆ ನಿಲ್ದಾಣದ ಈ ವಿನ್ಯಾಸಗಳು ಯಾರಿಗೂ ಇಷ್ಟವಾಗಿಲ್ಲ. ಇದು ನೋಡಲು ಐಟಿ ಪಾರ್ಕ್ ವಿನ್ಯಾಸದಂತಿದ್ದು, ಪಾಶ್ಚಾತ್ಯರಿಂದ ನಕಲು ಮಾಡಿದಂತೆ ತೋರುತ್ತದೆ. ತಿರುಪತಿಯು ದೈವತ್ವದಿಂದ ಕೂಡಿದೆ, ಇಲ್ಲಿ ದೈವಿಕ ಚಿಂತನೆಗಳು ಸದಾ ಹರಿದಾಡುತ್ತಿರುತ್ತದೆ. ಪಾಶ್ಚಿಮಾತ್ಯ ವಿನ್ಯಾಸಕ್ಕಿಂತ ಭಾರತೀಯ ವಾಸ್ತುಶಿಲ್ಪದ ಬಗ್ಗೆ ತಿಳಿದಿರುವವರಿಂದ ರೈಲ್ವೆ ನಿಲ್ದಾಣವನ್ನು ವಿನ್ಯಾಸಗೊಳಿಸಿ. ಅದು ಬಿಟ್ಟು ಗಾಜು ಮತ್ತು ಉಕ್ಕಿನಿಂದಲ್ಲ ಎಂದು ಟ್ವೀಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿರ್ದೇಶಕನ ಈ ಟ್ವೀಟ್ ಇದೀಗ ವೈರಲ್ ಆಗಿದ್ದು, ಜನ ಇವರ ಸಲಹೆಯನ್ನು ಒಪ್ಪಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!