ಉತ್ತರ ಪ್ರದೇಶಕ್ಕೆ ಹೂಡಿಕೆಯ ಸುರಿಮಳೆ: ಅದಾನಿ 70 ಸಾವಿರ ಕೋಟಿ, ಬಿರ್ಲಾದಿಂದ 40 ಸಾವಿರ ಕೋಟಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉತ್ತರ ಪ್ರದೇಶದ ಹೂಡಿಕೆದಾರರ ಶೃಂಗಸಭೆ 3.0 ದಲ್ಲಿ ಅದಾನಿ ಗ್ರೂಪ್​ನಿಂದ ಚೇರಮನ್​ ಗೌತಮ್ ಅದಾನಿ ಭಾಗಿಯಾಗಿದ್ದರು. ಈ ವೇಳೆ ಬರೋಬ್ಬರಿ 70,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿದ್ದು, ಇದರಿಂದ ಬರೋಬ್ಬರಿ 30 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದರು.
ಉತ್ತರ ಪ್ರದೇಶದಲ್ಲಿ ಅದಾನಿ ಸಮೂಹ ಕಂಪನಿಗಳು ಬರೋಬ್ಬರಿ 70 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಇದರಿಂದ ರಾಜ್ಯದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಇದರಲ್ಲಿ 11 ಸಾವಿರ ಕೋಟಿ ರೂ. ಹಸಿರು ಶಕ್ತಿ, ನೀರು, ಕೃಷಿ, ಲಾಜಿಸ್ಟಿಕ್ಸ್ ಮತ್ತು ಡೇಟಾ ಸೆಂಟರ್​ ವ್ಯವಹಾರದಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಇನ್ನು ರಸ್ತೆ ಮತ್ತು ಸಾರಿಗೆ ಮೂಲ ಸೌಕರ್ಯಕ್ಕಾಗಿ 24 ಸಾವಿರ ಕೋಟಿ ರೂ ಮತ್ತು ಬಹು ಮಾದರಿ ಲಾಜಿಸ್ಟಿಕ್ಸ್​ ಮತ್ತು ರಕ್ಷಣಾ ವಲಯದಲ್ಲಿ 35 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.ಇದರ ಜೊತೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ದಕ್ಷಿಣ ಏಷ್ಯಾದ ಅತಿದೊಡ್ಡ ಯುದ್ಧ ಸಾಮಗ್ರಿ ಸಂಕೀರ್ಣ ಸ್ಥಾಪಿಸಲು ಅದಾನಿ ಗ್ರೂಪ್​ ಪ್ರಕ್ರಿಯೆಯಲ್ಲಿದೆ ಎಂದು ಗೌತಮ್ ಅದಾನಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಆದಿತ್ಯ ಬಿರ್ಲಾ ಗ್ರೂಪ್​ನ ಮುಖ್ಯಸ್ಥ ಕುಮಾರ್ ಮಂಗಲಂ ಬಿರ್ಲಾ, ಉತ್ತರ ಪ್ರದೇಶದಲ್ಲಿ 40 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದ್ದು, ಇದರಿಂದ 35 ಸಾವಿರಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಮಾಹಿತಿ ಹಂಚಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!