ತನ್ನನ್ನು ತಾನೇ ಮದುವೆಯಾಗಲಿರುವ ಯುವತಿಗೆ ಶಾಕ್: ವ್ಯಾಪಕ ವಿರೋಧ, ಸಮಾರಂಭ ರದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ತನ್ನೆನೇ ತಾನೇ ವಿವಾಹ ಮಾಡಿಕೊಳ್ಳಲು ಮುಂದಾಗಿದ್ದ ವಡೋದರಾದ 24 ವರ್ಷದ ಯುವತಿಗೆ ಇದೀಗ ಕಂಟಕ ಎದುರಾಗಿದ್ದು, ವಡೋದರಾದ ಮೇಯರ್ ಸುನೀತಾ ಅವರ ಸಹೋದರಿ ಶುಕ್ಲಾ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ದೇವಸ್ಥಾನದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಮದುವೆ ಕಾರ್ಯಕ್ರಮ ರದ್ಧುಗೊಳಿಸಿದ್ದಾರೆ.
24 ವರ್ಷದ ಯುವತಿ ಜೂನ್​ 11ರಂದು ದೇವಸ್ಥಾನದಲ್ಲಿ ಸ್ವಯಂ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆಗಳು ಆಯೋಜನೆಗೊಂಡಿದ್ದವು. ಇದೀಗ ದೇವಸ್ಥಾನದಲ್ಲಿ ನಡೆಯಬೇಕಾಗಿದ್ದ ಸಮಾರಂಭ ರದ್ಧುಗೊಳಿಸಲಾಗಿದೆ.
ಇನ್ನು ಮದುವೆ ಬಗ್ಗೆ ಗೊತ್ತಾಗುತ್ತಿದ್ದಂತೆ ಅನೇಕರು ಪ್ರತಿಭಟನೆ ನಡೆಸುತ್ತಿದ್ದು, ಯುವತಿ ಮದುವೆಯಾಗಲಿರುವ ದೇವಸ್ಥಾನ ನಮ್ಮ ಪ್ರದೇಶದಲ್ಲಿದೆ. ಅದಕ್ಕೆ ನಾವು ಅನುಮತಿ ನೀಡಲ್ಲ ಎಂದಿದ್ದಾರೆ.
ಜೂನ್ 11ರಂದು ವಡೋದರದ ದೇವಸ್ಥಾನದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯಕ್ರಮ ನಡೆಯಬೇಕಾಗಿದೆ. ವಿಶೇಷವೆಂದರೆ ಆರತಕ್ಷತೆ, ಮೆಹಂದಿ ಸೇರಿದಂತೆ ತಾಳಿ ಕಟ್ಟುವ ಮುಹೂರ್ತ ಸಹ ಇದರಲ್ಲಿ ನಡೆಯಬೇಕಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!