ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಂತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಣೆಯಿಂದ ಕೊಲ್ಲಾಪುರಕ್ಕೆ ಹೋಗುತ್ತಿದ್ದ ಕಾರು ಸಾಂಗ್ಲಿಯ ಕಾಸೇಗಾಂವ್ ಪ್ರದೇಶದ ಯೆವಲೆವಾಡಿ ಘಾಟಾ ಪ್ರದೇಶದ ಬಳಿ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಎಲ್ಲಾ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಅರಿಂಜಯ್ ಶಿರೋಟೆ (35), ಮತ್ತು ಅವರ ಸಂಬಂಧಿಕರಾದ ಸ್ಮಿತಾ ಶಿರೋಟೆ (38) ಪೂರ್ವ ಶಿರೋಟೆ (14), ಸುನೇಶಾ ಶಿರೋಟೆ (10) ಮತ್ತು ವೀರು ಶಿರೋಟೆ (4) ಎಂದು ಗುರುತಿಸಲಾಗಿದೆ.