ಹೈದರಾಬಾದ್ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಶಾಸಕ ಪುತ್ರ ಭಾಗಿ ಸಾಕ್ಷ್ಯ ಬಹಿರಂಗಪಡಿಸಿದ ಬಿಜೆಪಿ ಶಾಸಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಾಸಕರ ಪುತ್ರನ ಕೈವಾಡವಿರುವ ಸಾಕ್ಷ್ಯವನ್ನು ಬಿಜೆಪಿ ಶಾಸಕ ಎಂ.ರಘುನಂದನ್ ರಾವ್ ಬಹಿರಂಗಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಘುನಂದನ್ ಪ್ರಸ್ತುತಪಡಿಸಿದ 10 ಸೆಕೆಂಡುಗಳ ವೀಡಿಯೊದಲ್ಲಿ ಹುಡುಗಿಯ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ದೃಶ್ಯಾವಳಿಗಳಿವೆ. ಕೆಂಪು ಬಣ್ಣದ ಮರ್ಸಿಡಿಸ್‌ನಲ್ಲಿ ನಾಲ್ವರು ಜನರಿದ್ದರು. ಆದರೆ ಅವರಲ್ಲಿ ಯಾರನ್ನೂ ಪೊಲೀಸರು ಆರೋಪಿಗಳೆಂದು ಪರಿಗಣಿಸಿಲ್ಲ ಎಂದು ರಾವ್ ಗಂಭೀರ ಆರೋಪ ಮಾಡಿದ್ದಾರೆ.
ವಿಡಿಯೊದಲ್ಲಿ ಅಪ್ರಾಪ್ತೆ ಮೇಲೆ ನಾಲ್ವರು ದೌರ್ಜನ್ಯ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಬಹುದು. ಪೋಕ್ಸೋ ಕಾಯ್ದೆಯ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪರಿಗಣಿಸಿಯೆ ಈ ವಿಡಿಯೋವನ್ನು ಪಕಟಪಡಿಸುತ್ತಿದ್ದೇನೆ. ವಿಡಿಯೋದಲ್ಲಿ ಹುಡುಗಿಯ ಮುಖ ಅಥವಾ ಆಕೆಯ ಗುರುತನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಇದರಲ್ಲಿ ಆರೋಪಿಗಳ ಮುಖಗಳನ್ನು ಸ್ಪಷ್ಟವಾಗಿ ಕಾಣಬಹುದು. ಆರೋಪಿಗಳು ಅಪ್ರಾಪ್ತರೋ, ಮತ್ತೊಂದೋ.. ಅದನ್ನು ನ್ಯಾಯಾಲಯ ಅಥವಾ ಪೊಲೀಸರು ನಿರ್ಧರಿಸಲಿ. ಆದರೆ ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಪೊಲೀಸರು ಮತ್ತು ಸಾರ್ವಜನಿಕರ ಮುಂದೆ ಸಾಕ್ಷ್ಯವನ್ನು ಮಂಡಿಸಿದ್ದೇನೆ. ಶಾಸಕರ ಪುತ್ರನ ಕೈವಾಡವಿದೆಯೇ ಎಂದು ಪೊಲೀಸರು ಈಗಲಾದರೂ ನಿರ್ಧರಿಸಬೇಕು ಎಂದು ರಾವ್ ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!