ದಿನಭವಿಷ್ಯ| ಇಂದು ಗೊಂದಲ, ನೀರಸ ಬದುಕು ನಿಮ್ಮದಾಗುತ್ತದೆ

ಮೇಷ
ಅತಿಯಾದ ಮಹತಾಕಾಂಕ್ಷಿ ನೀವು. ಆದರೆ ಇತರರ ಕುರಿತು ಕಟುವಾಗಿ ವರ್ತಿಸುವುದರಿಂದ ಸಂಬಂಧ ಹಾಳು. ಸಂಘರ್ಷ ತಪ್ಪಿಸಿ.

ವೃಷಭ
ಪ್ರೀತಿಯಲ್ಲಿ ಯಶಸ್ಸು. ನಿಮ್ಮ ಅಭೀಷ್ಟ ನೆರವೇರಲಿದೆ. ನಿಮ್ಮ ಜನಪ್ರಿಯತೆ ಹೆಚ್ಚಿಸುವ ಬೆಳವಣಿಗೆ. ಸಾಮಾಜಿಕ ಕಾರ್ಯದಲ್ಲಿ ಯಶಸ್ಸು ಸಿಗಲಿದೆ.

ಮಿಥುನ
ನಿಮ್ಮ ದೃಷ್ಟಿಕೋನ, ನಿಲುವು ಬದಲಿಸುವ ಪ್ರಸಂಗ ಸಂಭವಿಸೀತು. ಸಂಘರ್ಷದ ಹಾದಿ ತುಳಿಯದಿರಿ. ಸಮಸ್ಯೆಗಳು ಹೆಚ್ಚಳ. ಹೊಂದಾಣಿಕೆ ಮುಖ್ಯ.

ಕಟಕ
ನೀವು ಬಯಸಿದ ಪುರಸ್ಕಾರ ಇಂದು ದೊರಕುವುದು.  ಆದರೆ ಯಶಸ್ಸಿನಿಂದ ಮೈಮರೆಯದಿರಿ. ಕೌಟುಂಬಿಕ ಸಹಕಾರ, ಸಾಮರಸ್ಯ.

ಸಿಂಹ
ವೃತ್ತಿಯಲ್ಲಿ, ವ್ಯವಹಾರದಲ್ಲಿ ಶುಭ ಸುದ್ದಿ. ನೀವು ನಿರೀಕ್ಷಿಸಿದಂತೆ ಕೆಲಸ ಸಾಗುವುದು. ಆದರೆ ಕೌಟುಂಬಿಕವಾಗಿ ಒತ್ತಡ ಹೆಚ್ಚಳ.

ಕನ್ಯಾ
ಹಣಕಾಸಿನ ಕುರಿತಂತೆ ಇಂದು ಹೆಚ್ಚು ಚಿಂತಿಸುವಿರಿ. ಉಳಿತಾಯ ಮಾಡುವ ಬಗ್ಗೆ ಯೋಜಿಸುವಿರಿ. ಕೌಟುಂಬಿಕ ವೆಚ್ಚ ಕಡಿಮೆ ಮಾಡಬೇಕು.

ತುಲಾ
ಸರಿಯಾದ ಯೋಜನೆಯಿಲ್ಲದೆ ನಿಮ್ಮ ಕೆಲಸಗಳು ಕೆಡಬಹುದು. ಈ ತಪ್ಪಿನ ಅರಿವು ಇಂದು ಆಗುತ್ತದೆ. ತಪ್ಪು ಸರಿಪಡಿಸುವುದರಲ್ಲೇ ನಿಮ್ಮ ಹಿತವಿದೆ.

ವೃಶ್ಚಿಕ
ಅಕ ಕೆಲಸ, ಅಕ ಒತ್ತಡ, ಅಕ ಗೊಂದಲ. ಇದು ಇಂದಿನ ನಿಮ್ಮ ಸ್ಥಿತಿ. ಅಂತಿಮವಾಗಿ ಯಾವುದೇ ಕೆಲಸವೂ ಸರಿಯಾಗಿ ನಡೆಯದು.

ಧನು
ಯಾವುದೇ ಸೋಲು, ಕಷ್ಟ ನಿಮ್ಮನ್ನಿಂದು ಬಾಸದು. ಆದರೆ ದಿನವಿಡಿ ನಿಮ್ಮ ಪಾಲಿಗೆ ನೀರಸವೆನಿಸುತ್ತದೆ. ಸವಾಲುಗಳನ್ನು ನೀವು ಹೆಚ್ಚು ಬಯಸುವಿರಿ.

ಮಕರ
ಧಾರ್ಮಿಕ ಕಾರ್ಯ, ದೇವರ ಪ್ರಾರ್ಥನೆಯಲ್ಲಿ ಹೆಚ್ಚು ಕಾಲ ಕಳೆಯುವಿರಿ. ಕೌಟುಂಬಿಕ ಸಂಕಟ ಕಳೆಯಲು ದೇವರ ಮೊರೆ ಹೋಗುವಿರಿ.

ಕುಂಭ
ನಿಮ್ಮ ಸುತ್ತಲಿನ ಕೆಲವರ ಬಗ್ಗೆ ಶಂಕೆಗೊಳ್ಳುವ ಪ್ರಸಂಗ ಉದ್ಭವಿಸಬಹುದು. ವಿರೋಗಳನ್ನು ಸಂಧಾನದಿಂದ ಗೆಲ್ಲುವುದು ಒಳಿತು.

ಮೀನ
ವೃತ್ತಿಯಲ್ಲಿ ಬಿಕ್ಕಟ್ಟು ಎದುರಿಸುವಿರಿ. ಆದರೆ ಇತರರ ಸಹಕಾರದಿಂದ ಅದನ್ನು ನಿಭಾಯಿ ಸುವಿರಿ. ಖಾಸಗಿ ಬದುಕಿನಲ್ಲಿ ಏರುಪೇರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!