ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾಸಾ ರವಾನಿಸಿರುವ ಕ್ಯೂರಿಯಾಸಿಟಿ, ಮಂಗಳನ ಅಂಗಳದಿಂದ ಈಗ ಮತ್ತೊಂದು ಅಚ್ಚರಿಯ ದೃಶ್ಯ ಸೆರೆಹಿಡಿದು ಕಳುಹಿಸಿಕೊಟ್ಟಿದ್ದು, ವಿಜ್ಞಾನಿಗಳ ಮೆದುಳಿಗೆ ಇನ್ನಷ್ಟು ಮೇವು ಒದಗಿಸಿದೆ.
ಇತ್ತೀಚೆಗಷ್ಟೇ ಕ್ಯೂರಿಯಾಸಿಟಿ ಮಂಗಳ ಗ್ರಹದಲ್ಲಿ ಏಲಿಯನ್ ಡೋರ್ ರೀತಿ ರಚನೆ ಪತ್ತೆ ಮಾಡಿತ್ತು. ಇದರ ಬೆನ್ನಿಗೇ ಈ ರೋವರ್ ಈಗ ಮತ್ತೊಂದು ವಿಚಿತ್ರ ಕಲ್ಲಿನ ರಚನೆಯನ್ನ ಪತ್ತೆ ಮಾಡಿದೆ. ಈ ರಚನೆಗಳು ನೆಲದಿಂದ ಮೇಲೆ ಎದ್ದುನಿಂತಿರುವ ಉದ್ದ ಹಾಗೂ ತೆಳ್ಳನೆಯ ಆಕೃತಿಯಾಗಿ ಗೋಚರಿಸುತ್ತಿದ್ದು, ಇದೊಂದು ಕೂಲ್ ರಾಕ್ ಅಂದರೆ ಸುದೀರ್ಘ ಕಾಲದ ಸವೆತದಿಂದ ರಚನೆಯಾಗಿರುವ ಕಲ್ಲು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ