ಹೊಸದಿಗಂತ ವರದಿ, ಬೀದರ್:
ಜೂನ್ 15 ರಂದು ಬೀದರ ಜಿಲ್ಲೆಯಲ್ಲಿ ಆರಂಭವಾಗಲಿರುವ ಸ್ಟಾರ್ಏರ್ ವಿಮಾನ ಸೇವೆಯ ಕಾರ್ಯಕ್ರಮಕ್ಕೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜೂನ್ 15 ರಂದು ಆರಂಭವಾಗಲಿರುವ ಸ್ಟಾರ್ಏರ್ ನಾಗರಿಕ ವಿಮಾನಯಾನ ಸೇವೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಾಗಿ ಕರೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸ್ಟಾರ್ಏರ್ ವಿಮಾನ ಸೇವೆಯು ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಸೇವೆ ಒದಗಿಸುತ್ತದೆ. ಈ ಕಾರ್ಯಕ್ರಮ ಉದ್ಘಾಟನೆಯನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಸಂಬAಧಿಸಿದ ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬೀದರ ವಿಮಾನ ನಿಲ್ದಾಣದ ನಿರ್ದೇಶಕರಾದ ಅಮೀತ್ ಮಿಶ್ರಾ ಅವರು ಮಾತನಾಡಿ, ಜೂನ್ 15 ರಂದು ಬುಧವಾರ ಸ್ಟಾರ್ಏರ್ ಸೇವೆ ಬೀದರ ಜಿಲ್ಲೆಯಲ್ಲಿ ಆರಂಭಿಸುತ್ತಿದ್ದು, ಅಂದು ಮಧ್ಯಾಹ್ನ 2 ಗಂಟೆ 55 ನಿಮಿಷಕ್ಕೆ ಬೆಂಗಳೂರಿನಿAದ ವಿಮಾನ ಹೊರಟು ಬೀದರಗೆ 4 ಗಂಟೆ 05 ನಿಮಿಷಕ್ಕೆ ಬಂದು ತಲುಪಲಿರುವ ಈ ಮೊದಲ ವಿಮಾನಕ್ಕೆ ವಾಟರ ಸೆಲ್ಯೂಟ್, ಲೈಟಿಂಗ್ ಲ್ಯಾಂಪ್, ರಿಬ್ಬನ್ ಕತ್ತರಿಸುವ ಮೂಲಕ ಸ್ವಾಗತಿಸಲಾಗುತ್ತದೆ. ವಿಮಾನದಿಂದ ಮೊದಲು ಬರುವ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡುವುದರ ಜೊತೆಗೆ ಇತರೆ ಎಲ್ಲ ಪ್ರಯಾಣಿಕರಿಗೆ ಕಾಣಿಕೆ ನೀಡಲಾಗುತ್ತದೆ ಎಂದು ಹೇಳಿದರು.
ಸ್ಟಾರ್ಏರ್ನ ಸೀನಿಯರ್ ಮ್ಯಾನೇಜರ್ ಕಿರಣ ಅವರು ಮಾತನಾಡಿ, ಸ್ಟಾರ್ಏರ್ ವಿಮಾನವು ಗೋದಾವತ್ ಎಂಟರ್ ಪ್ರೆöÊಸೆಸ್ನ ಸಂಜಯ ಗೋದಾವತ್ ಮಾಲೀಕತ್ವದ ವಿಮಾನ ಸೇವೆಯಾಗಿದ್ದು, ಕೇಂದ್ರ ಸರ್ಕಾರದ ಉಡಾನ ಯೋಜನೆಯಲ್ಲಿ ಬೀದರ ಜಿಲ್ಲೆಗೆ ಇದು ಸೇವೆ ಒದಗಿಸಲಿದೆ. ಸ್ಟಾರ್ಏರ್ ವಿಮಾನವು ಜಟ್ ಇಂಜಿನ ಮೇಲೆ ಕೆಲಸ ನಿರ್ವಹಿಸುವುದರಿಂದ ಅತೀ ವೇಗದಲ್ಲಿ ಜನರಿಗೆ ಸೇವೆಯನ್ನು ಒದಗಿಸುತ್ತದೆ. ಇದು ಬೆಂಗಳೂರಿನಿAದ ಬೀದರಗೆ ಬಂದು ತಲುಪಲು ಕೇವಲ 50 ನಿಮಿಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ. ಇದು ಒಂದು ಬದಿಗೆ ಒಂದು ಸೀಟ್, ಇನ್ನೊಂದು ಬದಿಗೆ ಎರಡು ಸೀಟುಗಳನ್ನು ಹೊಂದಿದ್ದು, ಒಟ್ಟು 50 ಪ್ರಯಾಣಿಕರು ಆರಾಮವಾಗಿ ಈ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಒಬ್ಬ ಪ್ರಯಾಣಿಕರಿಗೆ 2599 ರೂ. ಎಲ್ಲ ತೆರಿಗೆ ಸೇರಿದಂತೆ ಪ್ರಯಾಣ ವೆಚ್ಚವಾಗಲಿದೆ. ಈ ವಿಮಾನವು ವಾರದಲ್ಲಿ ನಾಲ್ಕು ದಿನ ಬಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸೇವೆ ನೀಡಲಿದೆ. ಬೀದರನಿಂದ ಬೆಂಗಳೂರಿಗೆ ಮೊದಲು ವಿಮಾನದ ಟಿಕೇಟ ಬುಕ್ ಮಾಡುವ ಪ್ರಯಾಣಿಕರಿಗೆ ಮುಖ್ಯ ಅತಿಥಿಗಳಿಂದ ಪ್ರಶಸ್ತಿ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಬೀದರ ವಿಮಾನ ನಿಲ್ದಾಣದ ನಿರ್ದೇಶಕರಾದ ಅಮೀತ್ ಮಿಶ್ರಾ, ಸ್ಟಾರ್ಏರ್ನ ಸೀನಿಯರ್ ಮ್ಯಾನೇಜರ್ ಕಿರಣ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ನಯೀಮ್ ಮೋಮಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.