ಬ್ರಹ್ಮಾವರದಲ್ಲಿ ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಡುಪಿಯ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರ ನೇತೃತ್ವದ ವಿಶೇಷ ತಂಡವು ಇಬ್ಬರು ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಶುಕ್ರವಾರ ಬಂಧಿಸಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕು, ಈಶ್ವರ ದೇವಸ್ಥಾನದ ಬಳಿಯ ಅತ್ತಿಗುಡ್ಡ ನಿವಾಸಿಗಳಾದ ಸೋಮ ಶೇಖರ ಪ್ರಾಯ (21) ಹಾಗು ಬಾಗಲಕೋಟೆ ಜಿಲ್ಲೆಯ ಹುನಗುಂಡ ತಾಲೂಕಿನ ಹೊಸಮನೆ ಚಿಕ್ಕರನಕೇರಿಯ ಶಂಕರ ಗೌಡ (23) ಬಂಧಿತ ಆರೋಪಿಗಳು

ಉಡುಪಿ ಜಿಲ್ಲೆಯ ವಿವಿಧಡೆ ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವುದು ಹಾಗೂ ಪತ್ತೆ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರ ನಿರ್ದೇಶನದಂತೆ ವಾಹನ ತಪಾಸಣೆ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಬ್ರಹ್ಮಾವರ ಪೊಲೀಸ್‌‌‌‌ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತೃತ್ವದ ವಿಶೇಷ ತಂಡ ಕೋಟ ಸರಹದ್ದಿನ ವಿವಿಧ ಭಾಗದಲ್ಲಿ ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲಿಸುತ್ತಿರುವ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ

ಶುಕ್ರವಾರ ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್‌‌‌‌‌‌ ಬಳಿ ನಂಬರ್ ಪ್ಲೇಟ್‌‌‌‌‌‌‌ ಇಲ್ಲದ ಸ್ಪ್ಲೆಂಡರ್‌‌‌‌ ‌‌‌‌‌‌‌‌‌‌‌ ವಾಹನವನ್ನು ಸಂಶಯಾಸ್ಪದವಾಗಿ ನಿಲ್ಲಿಸಿದ್ದು, ದಾಖಲೆಯನ್ನು ವಿಚಾರಿಸಿದಾಗ ಯಾವುದೇ ದಾಖಲೆ ನೀಡದ್ದರಿಂದ ಕಳ್ಳತನ ಮಾಡಿದ ಬೈಕ್‌‌‌‌‌‌‌‌ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಆರೋಪಿಗಳ ವಿವರ

ಈ ದ್ವಿಚಕ್ರ ವಾಹನ ಕಳ್ಳರು ಕಳೆದ 3 ವರ್ಷಗಳಿಂದ ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದು, ಕೋಟ ಪೊಲೀಸರ ವಿಶೇಷ ತಂಡವು ಒಟ್ಟು 12 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸಿರುತ್ತಾರೆ. ಇದರಲ್ಲಿ ಉಡುಪಿ ನಗರ ಠಾಣೆಯ – 7, ಬ್ರಹ್ಮಾವರ ಠಾಣೆಯ – 1, ಶಂಕರಾನಾರಾಯಣ ಠಾಣೆಯ – 1, ಶೃಂಗೇರಿ ಠಾಣೆಯ- 1, ವಿಜಯನಗರದ ಜಿಲ್ಲೆಯ ಇಟಗಿ ಠಾಣೆಯ -1 ಮತ್ತು ದಾವಣಗೆರೆ ಠಾಣೆಯ -1 ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು ತನಿಖೆಯಿಂದ ತಿಳಿದುಬಂದಿರುತ್ತದೆ. ಇವುಗಳಲ್ಲಿ 3 ಪಲ್ಸರ್‌‌‌‌‌‌‌‌ ಬೈಕ್‌‌‌‌, 5 ಸ್ಪ್ಲೆಂಡರ್‌‌‌‌‌‌ ಬೈಕ್‌‌‌‌ ಮತ್ತು 1 ಹೀರೋ ಹೆಚ್‌‌‌‌.ಎಫ್‌‌‌‌. ಡಿಲಕ್ಸ್‌‌‌‌ ಬೈಕ್‌‌‌‌‌ ಒಳಗೊಂಡಂತೆ ಒಟ್ಟು 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಸ್ವಾಧೀನಪಡಿಸಿದ ಸೊತ್ತುಗಳ ಮೌಲ್ಯ ಅಂದಾಜು -450000 /- ರೂಪಾಯಿ ಆಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!