ಹಲ್ಲಿ ಓಡಿಸಲು ಕೆಲ ಮನೆ ಮದ್ದುಗಳನ್ನು ಬಳಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯ ದಿನಗಳಿಗಿಂತ ಬೇಸಿಗೆಯಲ್ಲಿ ಹಲ್ಲಿಗಳ ಸಮಸ್ಯೆ ತೀವ್ರವಾಗಿರುವುದು ಕಂಡುಬರುತ್ತದೆ. ಮುಖ್ಯ ಕಾರಣವೆಂದರೆ ಬಿಸಿ, ಹೆಚ್ಚಿನ ತಾಪಮಾನದ ವಾತಾವರಣವು ಹಲ್ಲಿಗಳ ಸಂತಾನೋತ್ಪತ್ತಿಗೆ ಅನುಕೂಲಕರವಾಗಿದೆ. ಇದು ಹಲ್ಲಿಗಳಿಗೆ ಮಾತ್ರವಲ್ಲ, ಎಲ್ಲಾ ಸರೀಸೃಪಗಳಲ್ಲೂ ಇದೇ ಸಮಸ್ಯೆ ಇದೆ. ಮನೆಯಲ್ಲಿದ್ದು ಸದಾ ಕಿರಿಕಿರಿ ಉಂಟುಮಾಡುವ ಹಲ್ಲಿ ಓಡಿಸಲು ಈ ಮನೆ ಸಲಹೆಗಳನ್ನು ಅನುಸರಿಸಿ.

ಮೆಣಸಿನಕಾಯಿ ಖಾರ, ಕರಿಮೆಣಸು-ಮೆಣಸಿನಕಾಯಿ ಖಾರದ ಜೊತೆಗೆ ಕರಿಮೆಣಸನ್ನು ಸೇರಿಸಿ ಮನೆಯ ಮೂಲೆಗಳಲ್ಲಿ ಸಿಂಪಡಿಸಿ. ಅದನ್ನು ಮನೆಯಲ್ಲಿ, ಕಿಟಕಿಯ ಮೂಲೆಗಳಲ್ಲಿ, ಬಾಗಿಲುಗಳ ಬಳಿ ಸಿಂಪಡಿಸಿ. ಇವುಗಳ ವಾಸನೆಯಿಂದ ಹಲ್ಲಿಗಳು ದೂರ ಹೋಗುತ್ತವೆ.

ಕೋಳಿ ಮೊಟ್ಟೆಯ ಚಿಪ್ಪು- ಹಲ್ಲಿಗಳು ಕೋಳಿ ಮೊಟ್ಟೆಯ ವಾಸನೆಯನ್ನು ಇಷ್ಟಪಡುವುದಿಲ್ಲ ಎಂದು ಸಂಶೋಧನೆ ತೋರಿಸಿದೆ. ಅವು ಓಡಾಡುವ ಜಾಗದಲ್ಲಿ ಕೋಳಿ ಮೊಟ್ಟೆ ಇರಿಸಿ.

ಕಾಫಿ, ತಂಬಾಕು- ಕಾಫಿ ಪುಡಿಯನ್ನು ಬಳಸಿಯೂ ಹಲ್ಲಿಗಳನ್ನು ಹಿಮ್ಮೆಟ್ಟಿಸಬಹುದು. ಹಲ್ಲಿಯನ್ನು ಹಿಮ್ಮೆಟ್ಟಿಸಲು ತಂಬಾಕು ಬೆರೆಸಿದ ನೀರನ್ನು ಮನೆಯ ಮೂಲೆಗಳಲ್ಲಿ ಸಿಂಪಡಿಸಿ.

ಈರುಳ್ಳಿ, ಬೆಳ್ಳುಳ್ಳಿ- ಹಲ್ಲಿಗಳು ಹೆಚ್ಚು ಓಡಾಡುವ ಜಾಗದಲ್ಲಿ ಬೆಳ್ಳುಳ್ಳಿ ಎಸಳು ಮತ್ತು ಈರುಳ್ಳಿ ತುಂಡುಗಳನ್ನು ಇರಿಸಿ. ಇಲ್ಲವಾದರೆ ಎರಡರ ಮಿಶ್ರಣವನ್ನು ಪೇಸ್ಟ್ ಅನ್ನು ನೀರಿನಲ್ಲಿ ಬೆರೆಸಿ ಚಿಮುಕಿಸಿ

ಕರ್ಪೂರ- ಮನೆಯ ಮೂಲೆಗಳಲ್ಲಿ ಕರ್ಪೂರವನ್ನು ಇಟ್ಟರೆ ಹಲ್ಲಿಗಳನ್ನು ಓಡಿಸಬಹುದು.

ನೆನಪಿಡಿ, ಹಲ್ಲಿಗಳು ತಮ್ಮ ಮೊಟ್ಟೆಗಳನ್ನು ಹೆಚ್ಚು ತಾಪಮಾನ ಇರುವ ಸ್ಥಳಗಳಲ್ಲಿ ಇಡುತ್ತವೆ. ನೀವು ಆ ಸ್ಥಳಗಳಲ್ಲಿ ಈ ತಂತ್ರಗಳನ್ನು ಬಳಸಿದರೆ ಇನ್ನೂ ಉತ್ತಮ ಪರಿಹಾರವನ್ನು ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!