ಬರೋಬ್ಬರಿ 48,390 ಕೋಟಿ ರೂಪಾಯಿಗೆ IPL Media Rights ಮಾರಾಟ: ಜಯ್ ಷಾ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂದಿನ ಐದು ವರ್ಷದಲ್ಲಿ ನಡೆಯಲಿರುವ 410 ಐಪಿಎಲ್ ಪಂದ್ಯಗಳ ಟಿವಿ (TV) ಹಾಗೂ ಡಿಜಿಟಲ್ (Digital) ಪ್ರಸಾರದ ಹಕ್ಕುಗಳು ದಾಖಲೆಯ 48, 390 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ವಯೋಕಾಮ್ (Viacom18), ಸ್ಟಾರ್ ಇಂಡಿಯಾ (Disney Star Or Star India) ಹಾಗೂ ಟೈಮ್ಸ್ ಇಂಟರ್ನೆಟ್ (Times Internet) ಕಂಪನಿಗಳು ತಮ್ಮ ನಡುವೆ ಹಕ್ಕುಗಳನ್ನು ಹಂಚಿಕೊಂಡಿವೆ.
ಟ್ವಿಟರ್ ಮೂಲಕ ಹರಾಜಿನಲ್ಲಿ ಗೆದ್ದವರ ವಿವರಗಳನ್ನು ಜಯ್ ಷಾ ಪ್ರಕಟ ಮಾಡಿದ್ದಾರೆ.ಐಪಿಎಲ್ ಆರಂಭದಿಂದಲೂ ತನ್ನ ಬೆಳವಣಿಗೆ ಮೂಲಕ ಭಾರತೀಯ ಕ್ರಿಕೆಟ್ ಅನ್ನು ಶ್ರೀಮಂತವಾಗಿಸಿದೆ. ಈಗ ಬ್ರ್ಯಾಂಡ್ ಐಪಿಎಎಲ್ ಮಾಧ್ಯಮ ಹಕ್ಕುಗಳ ಇ-ಹರಾಜು 48,390 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಇನ್ನೊಂದು ದಾಖಲೆ ಮಾಡಿದೆ. ಪ್ರತಿ ಪಂದ್ಯದ ನೇರಪ್ರಸಾರ ಮಾಡುವ ಮೌಲ್ಯದ ಆಧಾರದ ಮೇಲೆ ವಿಶ್ವದ 2ನೇ ಮೌಲ್ಯಯುತ ಲೀಗ್ ಐಪಿಎಲ್ ಆಗಿದೆ ಎಂದು ಜಯ್ ಷಾ ಬರೆದಿದ್ದಾರೆ.

ನಮ್ಮ ರಾಜ್ಯದ ಸಂಘಗಳು, ಐಪಿಎಲ್ ಫ್ರಾಂಚೈಸಿಗಳು ಅಭಿಮಾನಿಗಳ ಅನುಭವವನ್ನು ಹೆಚ್ಚಿಸಲು ಮತ್ತು ನಮ್ಮ ದೊಡ್ಡ ಪಾಲುದಾರರಾದ ‘ಕ್ರಿಕೆಟ್ ಅಭಿಮಾನಿ’ಯನ್ನು ಚೆನ್ನಾಗಿ ನೋಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಐಪಿಎಲ್‌ನೊಂದಿಗೆ ಒಟ್ಟಾಗಿ ಕೆಲಸ ಮಾಡುವ ಸಮಯ ಬಂದಿದೆ ಎಂದು ಜಯ್ ಷಾ ಹೇಳಿದ್ದಾರೆ.

2023 ರಿಂದ 2027ರವರೆಗೆ ಐಪಿಎಲ್ ನಲ್ಲಿ ಒಟ್ಟು 410 ಐಪಿಎಲ್ ಪಂದ್ಯಗಳು ನಡೆಯಲಿದ್ದು, ಮೂರು ದಿನಗಳ ಹರಾಜು ಪ್ರಕ್ರಿಯೆ ಮಂಗಳವಾರ ಮುಕ್ತಾಯ ಕಂಡಿದೆ. ಈ ಐದು ವರ್ಷದ ಅವಧಿಯಲ್ಲಿ ಹಾಗೇನಾದರೂ ಪಂದ್ಯಗಳ ಸಂಖ್ಯೆ ಏರಿಕೆ ಕಂಡಲ್ಲಿ ಅದರ ನೇರಪ್ರಸಾರ ಹಕ್ಕುಗಳನ್ನು ಬಿಸಿಸಿಐ ಇನ್ನೊಮ್ಮೆ ಮಾರಾಟ ಮಾಡಲಿದೆ.

ಪ್ಯಾಕೇಜ್ ಎ: ಭಾರತದಲ್ಲಿ ಟಿವಿ ಪ್ರಸಾರ
ಒಟ್ಟು ಪಂದ್ಯಗಳು: 410
ಒಟ್ಟು ಹಣ: 23,575 ಕೋಟಿ (USD 3.0 bn)
ಪ್ರತಿ ಪಂದ್ಯಕ್ಕೆ: 57.5 ಕೋಟಿ (USD 7.4 mn)
ಬಿಡ್ ವಿಜೇತ ಕಂಪನಿ: ಸ್ಟಾರ್ ಇಂಡಿಯಾ

ಪ್ಯಾಕೇಜ್ ಬಿ: ಭಾರತದಲ್ಲಿ ಡಿಜಿಟಲ್ ಪ್ರಸಾರ
ಒಟ್ಟು ಪಂದ್ಯಗಳು: 410
ಒಟ್ಟು ಹಣ: 20,500 ಕೋಟಿ (USD 2.6 bn)
ಪ್ರತಿ ಪಂದ್ಯಕ್ಕೆ: 50 ಕೋಟಿ (USD 6.4 mn)
ಬಿಡ್ ವಿಜೇತ ಕಂಪನಿ: ವಯೋಕಾಮ್

ಪ್ಯಾಕೇಜ್ ಸಿ: ಆಯ್ದ 18 ಪಂದ್ಯಗಳ ನೇರಪ್ರಸಾರ
ಒಟ್ಟು ಪಂದ್ಯಗಳು: 18
ಒಟ್ಟು ಹಣ: 3,258 ಕೋಟಿ (USD 0.4 bn)
ಪ್ರತಿ ಪಂದ್ಯಕ್ಕೆ: 33.24 ಕೋಟಿ (USD 4.3 mn)
ಬಿಡ್ ವಿಜೇತ ಕಂಪನಿ: ವಯೋಕಾಮ್

ಪ್ಯಾಕೇಜ್ ಡಿ: ವಿದೇಶದಲ್ಲಿ ಪಂದ್ಯಗಳ ನೇರಪ್ರಸಾರ
ಒಟ್ಟು ಪಂದ್ಯಗಳು: 410
ಒಟ್ಟು ಹಣ: 1,058 ಕೋಟಿ (USD 0.1 bn)
ಪ್ರತಿ ಪಂದ್ಯಕ್ಕೆ: 2.6 ಕೋಟಿ (USD 0.3 mn)
ಬಿಡ್ ವಿಜೇತ ಕಂಪನಿ: ವಯೋಕಾಮ್ ಮತ್ತು ಟೈಮ್ಸ್ ಇಂಟರ್ನೆಟ್
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಕ್ಕು ವಯೋಕಾಮ್ ಗೆ
ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ಅಮೆರಿಕ ಹಕ್ಕು ಟೈಮ್ಸ್ ಇಂಟರ್ನೆಟ್

ಒಟ್ಟಾರೆ ಐಪಿಎಲ್ ಮಾಧ್ಯಮ ಹಕ್ಕುಗಳ ಆದಾಯ
ಒಟ್ಟು ಪಂದ್ಯಗಳು: 410
ಒಟ್ಟು ಹಣ: 48,390 ಕೋಟಿ(USD 6.2 bn)
ಪ್ರತಿ ಪಂದ್ಯಕ್ಕೆ 118.0 ಕೋಟಿ (USD 15.1 mn)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!