Monday, November 10, 2025

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ರಾಜಾತಿಥ್ಯದ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ದರ್ಶನ್‌ ಆಪ್ತ ಗೆಳೆಯ ನಟ ಧನ್ವೀರ್‌ಗೆ ಈಗ ಸಂಕಷ್ಟ ಎದುರಾಗಿದೆ. ಸಿಸಿಬಿ ಪೊಲೀಸರು ಧನ್ವೀರ್‌ ವಿಚಾರಣೆ ನಡೆಸಿದ್ದಾರೆ.

ವಿಡಿಯೋ ಬಿಡುಗಡೆಯಾದ ಪ್ರಕರಣ ಪೊಲೀಸ್‌ ಇಲಾಖೆಗೆ ಮುಜುಗರ ತಂದ ಬೆನ್ನಲ್ಲೇ ಸಿಸಿಬಿ ಪೊಲೀಸರು ಈಗ ಧನ್ವೀರ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಡಿಯೋಗಳನ್ನು ಧನ್ವೀರ್‌ ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಸದ್ಯ ಜೈಲಿನ ವಿಡಿಯೋನ ದರ್ಶನ್ ಆಪ್ತ ಧನ್ವೀರ್ ರಿಲೀಸ್ ಮಾಡಿರೋ ಅನುಮಾನ ಇದೆ. ಈ ಕಾರಣದಿಂದಲೇ ಧನ್ವೀರ್ ವಿಚಾರಣೆ ನಡೆಸಲಾಗಿದೆ. ಆದರೆ ಅವರ ಬಳಿ ಆ ರೀತಿಯ ಯಾವುದೇ ವಿಡಿಯೋ ಪತ್ತೆ ಆಗಿಲ್ಲ. ಹಾಗಾಗಿ ವಿಚಾರಣೆ ನಡೆಸಿ ಅವರನ್ನು ಸಿಸಿಬಿ ಪೊಲೀಸರು ಕಳುಹಿಸಿದ್ದಾರೆ. 

error: Content is protected !!