ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್ ಆಗಿ ಭಾರತೀಯ ‘ಚಾಯ್‌ ಪಾನಿ’ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಪಾಕ ಪದ್ಧತಿಗೆ ವಿಶ್ವಾದ್ಯಂತ ಎಷ್ಟು ಜನಪ್ರಿಯತೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕದಲ್ಲಿರುವ ನಮ್ಮ ಭಾರತೀಯ ರೆಸ್ಟೋರೆಂಟ್‌ಗೆ ‘ಅತ್ಯುತ್ತಮ ರೆಸ್ಟೋರೆಂಟ್-2022’ ಕ್ಕೆ ಆಯ್ಕೆಯಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಸ್ಥಾಪಿಸಿರುವ ‘ಚಾಯ್‌ಪಾನಿ’ ಸ್ಟ್ರೀಟ್ ಫುಡ್ ರೆಸ್ಟೋರೆಂಟ್ ಅತ್ಯುತ್ತಮ ರೆಸ್ಟೋರೆಂಟ್ ಆಗಿ ಆಯ್ಕೆಯಾಗಿದೆ. ಚಿಕಾಗೋದಲ್ಲಿರುವ ʻಜೇಮ್ಸ್ ಬಿಯರ್ಡ್ ಫೌಂಡೇಶನ್ʼ ಪ್ರತಿ ವರ್ಷ ಪ್ರಶಸ್ತಿಗಳನ್ನು ಪ್ರಕಟಿಸುತ್ತದೆ.

ಚಾಯ್‌ಪಾನಿ ರೆಸ್ಟೋರೆಂಟ್‌ ಈ ವರ್ಷ ಬೆಸ್ಟ್‌ ರೆಸ್ಟೋರೆಂಟ್‌ ಆಯ್ಕೆಯಾಗಿದ್ದು, ಇದು ಉತ್ತರ ಕೆರೊಲಿನಾದ ಆಶ್ವಿಲ್ಲೆಯಲ್ಲಿದೆ. ಈ ರೆಸ್ಟೊರೆಂಟ್‌ಗೆ ಎಲ್ಲಾ ಕಡೆಯಿಂದ ಬಂದು ಜನ ಊಟ ಮಾಡುತ್ತಾರೆ. ಇಲ್ಲಿ ಸಿಗುವ ‘ಚಾಟ್’ ಬಹಳ ಫೇಮಸ್ ಹಾಗಾಗಿ ಈ ರೆಸ್ಟೋರೆಂಟ್ ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತದೆ. ಚಾಟ್ ಪ್ರಿಯರು ಚಾಯ್ ಪಾನಿ ರೆಸ್ಟೋರೆಂಟ್‌ನೇ ಹೆಚ್ಚು ಆಯ್ಕೆ ಮಾಡುತ್ತಾರೆ ಎಂದು ಫೌಂಡೇಶನ್‌ ತಿಳಿಸಿದೆ. ಇತರ ರೆಸ್ಟೋರೆಂಟ್‌ಗಳಿಗೆ ಹೋಲಿಸಿದರೆ ಇಲ್ಲಿ ದೊರಕುವ ಪದಾರ್ಥಗಳ ಬೆಲೆ ಕಡಿಮೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!