ಮೈನಡುಗಿಸುತ್ತದೆ ಈ ಸಮಾಧಿ: ತೆರೆದರೆ ಮನುಕುಲಕ್ಕೆ ಆಪತ್ತು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್‌ನಲ್ಲಿ ಸಮಾಧಿಯೊಂದು ಪತ್ತೆಯಾಗಿದ್ದು, ಅದರಲ್ಲಿ ರಕ್ತದ ಬಣ್ಣದಲ್ಲಿ ಕೆತ್ತಲಾಗಿರುವ ಎಚ್ಚರಿಕೆ ಸಂದೇಶ ಈ ಸಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಇಸ್ರೇಲ್‌ನ ಗಲಿಲಿಯಲ್ಲಿರುವ ಯಹೂದಿ ಬೀಟ್ ಶೀಯಾರಿಮ್ ಸ್ಮಶಾನದ ಹಳೆಯ ಗುಹೆಯಲ್ಲಿ ಪುರಾತತ್ವ ತಜ್ಞರು ಈ ಸಮಾಧಿಯನ್ನು ಕಂಡುಹಿಡಿದಿದ್ದಾರೆ.

ಈ ಬಗ್ಗೆ ವರದಿ ಮಾಡಿರುವ ಟೈಮ್ಸ್ ಆಫ್ ಇಸ್ರೇಲ್, ಸಮಾಧಿಯಲ್ಲಿರುವ ಪಠ್ಯವನ್ನು ಪ್ರಾಚೀನ ಹೀಬ್ರೂ ಭಾಷೆಯಲ್ಲಿ ಬರೆಯಲಾಗಿದೆ ಎಂದು ಹೇಳಿದೆ. ಜೊತೆಗೆ ಯಾವುದೇ ಕಾರಣಕ್ಕೂ ಈ ಸಮಾಧಿಯನ್ನು ತೆರೆಯದಿರಿ. ಒಂದು ವೇಳೆ ತೆರೆದಿರಿ ಎಂದಾದರೆ ಶಾಪಗ್ರಸ್ತರಾಗುತ್ತೀರಿ ಎಂದು ಬರೆದಿರುವ ಸಮಾಧಿ ಗುರುತುಗಳ ಚಿತ್ರಗಳನ್ನು ಅದು ಹಂಚಿಕೊಂಡಿದೆ.

ಇತ್ತ ಇಸ್ರೇಲ್ ರಾಜ್ಯದ ಅಧಿಕೃತ ಟ್ವಿಟ್ಟರ್ ಖಾತೆ ಕೂಡಾ ಈ ಚಿತ್ರಗಳನ್ನು ಹಂಚಿಕೊಂಡಿದೆ. ‘ಇದು ನೀವು ತೆರೆಯಬಾರದ ಸಮಾಧಿ: ಜಾಕೋಬ್ ದಿ ಕನ್ವರ್ಟ್ ಎಂಬ ಯಹೂದಿ ವ್ಯಕ್ತಿಗೆ ಸೇರಿದ 1,800 ವರ್ಷಗಳಷ್ಟು ಹಳೆಯದಾದ ಸಮಾಧಿ ಇತ್ತೀಚೆಗೆ ಗಲಿಲೀಯಲ್ಲಿ ಪತ್ತೆಯಾಗಿದೆ. ಇದರಲ್ಲಿ ಸಮಾಧಿಯನ್ನು ತೆರೆಯದಂತೆ ಎಚ್ಚರಿಕೆ ನೀಡುವ ಬರಹಗಳಿವೆ’ ಎಂದು ಬರೆದುಕೊಂಡಿದೆ.
ಪ್ರಾಚೀನ ರೋಮನ್ ಅವಧಿಯ ಬರಹಗಳು ಇದಾಗಿದ್ದು, ಇದನ್ನು ಏಕೆ ಬರೆಯಲಾಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಇತಿಹಾಸಕಾರರು ನಡೆಸುತ್ತಿದ್ದಾರೆ. ಅಂದಹಾಗೆ ಕಳೆದ 65 ವರ್ಷಗಳಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಪತ್ತೆಯಾದ ಮೊದಲ ಸಮಾಧಿ ಇದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!