ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಾಡಿ ಬೆಳೆಸಿಕೊಳ್ಳುವುದು, ಅಥವಾ ಝೀರೋ ಸೈಜ್, ತಿಂದಿದ್ದನ್ನು ಕರಗಿಸಲು ಜಿಮ್ಗೆ ಹೋಗುವುದು ಫ್ಯಾಷನ್ ಆಗಿದೆ. ಜಿಮ್ನಲ್ಲಿ ನಡೆಸುವ ಕಸರತ್ತುಗಳನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಸಹ ಹೊಸದೇನಲ್ಲ. ಆದರೆ ಈ ವಿಡಿಯೋದಲ್ಲಿ ಮನುಷ್ಯರಿಗೆ ಸೆಡ್ಡು ಹೊಡೆಯುವ ರೇಂಜ್ಗೆ ಬೆಕ್ಕೊಂದು ವರ್ಕೌಟ್ ಮಾಡಿದೆ. ಬ್ಯುಟೆಂಗೆಬೀಡೆನ್ ತನ್ನ ಟ್ವಿಟ್ಟರ್ ಖಾತೆ ಅಧಿಕೃತವಾಗಿ ಪೋಸ್ಟ್ ಮಾಡಿದ್ದು, ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದು, ಅವರವರ ಮನೆಯ ಬೆಕ್ಕುಗಳು ಮಾಡುವ ಕುಚೇಷ್ಟೆ ಕುರಿತು ಟ್ಯಾಗ್ ಮಾಡಿದ್ದಾರೆ.
Work out.. 😅 pic.twitter.com/WqFsitRHQj
— Buitengebieden (@buitengebieden) June 15, 2022