ಹೊಸ ದಿಗಂತ ವರದಿ, ಕುಶಾಲನಗರ:
ಇಲ್ಲಿಗೆ ಸಮೀಪದ ಹುದುಗೂರು ಗ್ರಾಮದ ಬಾಲಕಿಯೊಬ್ಬಳು ಯೋಗಾಸನದಲ್ಲಿ ವಿಶ್ವ ದಾಖಲೆ ಮಾಡುವ ಮೂಲಕ ಕೊಡಗಿಗೆ ಕೀರ್ತಿ ತಂದಿದ್ದಾರೆ.
ಕುಶಾಲನಗರ ತಾಲೂಕಿನ ಹುದುಗೂರು ಗ್ರಾಮದ ಮುಕ್ಕಾಟಿ ದಿವ್ಯಾ (12)ಅವರು ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈಕೆ ಹುದುಗೂರಿನ ಮುಕ್ಕಾಟಿ ಅರುಣ್ ಕುಮಾರ್ ಮತ್ತು ಯಶೋದಾ ದಂಪತಿಯ ಪುತ್ರಿ.