ಸೇನೆಯಲ್ಲಿನ ಸೇವೆ ದೇಶ ಭಕ್ತಿ ಹೆಚ್ಚುತ್ತದೆ: ವಸತಿ ಸಚಿವ ವಿ. ಸೋಮಣ್ಣ

ಹೊಸದಿಗಂತ ವರದಿ, ಕಲಬುರಗಿ:

ಅಗ್ನಿಪಥ ಯೋಜನೆ ವಿರೋಧಿಸುವವರ ಹಿಂದೆ ಯಾರಿದ್ದಾರೆ ಅಂತಾ ನನ್ನಗೆ ಗೊತ್ತಿಲ್ಲ, ಆದರೆ ಯುವಕರು ಯೋಜನೆ ಭಾಗವಾಗಿ ಮಿಲಿಟರಿ ಸೇರಿ, ನಾಲ್ಕು ವರ್ಷ‌ ಸೇವೆ ಮಾಡಿದರೆ ದೇಶ ಭಕ್ತಿಯ ಭಾವನೆಗಳು ಹೆಚ್ಚುತ್ತದೆ. ಪ್ರಧಾನಿ ಮೋದಿ ಅವರು ಸಾಮಾನ್ಯ ಜನರಿಗೆ ಬೇಡವಾದ ಯೋಜನೆ ಜಾರಿಗೆ ತರುವುದಿಲ್ಲ ಎಂಬ ಭರವಸೆ ಇದೆ. ಈ ಯೋಜನೆ ಬಗ್ಗೆ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಜನರಿಗೆ ತಿಳಿಸಲಾಗುತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಬಿಬಿಎಂಪಿ ಚುನಾವಣೆ ವಿಚಾರ ಮಾತನಾಡಿ, ಬೆಂಗಳೂರಿನ ಜನಸಂಖ್ಯೆ ಒಂದೂವರೆ ಕೋಟಿಗೂ ಅಧಿಕವಿದೆ. ಚುನಾವಣೆ ನಡೆಸಲು ಸಿಎಂ ಬೊಮ್ಮಾಯಿ‌ ಉತ್ಸುಕರಾಗಿದ್ದಾರೆ. ಕೋರ್ಟ್ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಸಲಾಗುತ್ತದೆ ಎಂದರು.

ವಿಧಾನ ಪರಿಷತ್ ಚುನಾವಣೆ ಫಲಿತಾಂಶದಲ್ಲಿ ನಮ್ಮಲ್ಲಿನ ಲೋಪ ದೋಷಗಳಿಂದ ಹಿನ್ನಡೆಯಾಗಿದೆ. ಇದು ನಮ್ಮಗೆ ಎಚ್ಚರಿಕೆ ಘಂಟೆಯಾಗಿದೆ. ಮುಂದಿನ ದಿನಗಳಲ್ಲಿ ತಪ್ಪುಗಳನ್ನು ಸರಿಪಡಿಸಿ ಚುನಾವಣೆ ಎದುರಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!