ಪಿಯು ಫಲಿತಾಂಶ: ರಾಜ್ಯಕ್ಕೆ ವಿಜಯಪುರ 3ನೇ ಸ್ಥಾನ

ಹೊಸದಿಗಂತ ವರದಿ, ವಿಜಯಪುರ:

ಪ್ರಸಕ್ತ ವರ್ಷದ ಪಿಯುಸಿ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಜಿಲ್ಲೆಯ ಶೇ. 73.98 ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿಯೇ 3ನೆ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷ ಕೊರೋನಾ ಸಂಕಷ್ಟದಿಂದ ಪಿಯುಸಿ ಪರೀಕ್ಷೆ ನಡೆಸದೇ, ವಿದ್ಯಾರ್ಥಿಗಳನ್ನು ನೇರವಾಗಿ ಪಾಸ್ ಮಾಡಲಾಗಿತ್ತು. ಪ್ರಸಕ್ತ ವರ್ಷ ಪರೀಕ್ಷೆ ನಡೆಸಲಾಗಿದ್ದು, ಪಿಯುಸಿ ಪರೀಕ್ಷೆ 28,739 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 16,750 ವಿದ್ಯಾರ್ಥಿಗಳು ಹಾಗೂ 11,989 ವಿದ್ಯಾರ್ಥಿನಿಯರು ಒಟ್ಟು 21,261 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!