ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥ:
1ಟೇಬಲ್ ಸ್ಪೂನ್- ಜೀರಿಗೆ
೨ಟೇಬಲ್ ಸ್ಪೂನ್- ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಒಂದು ಈರುಳ್ಳಿ
ಕ್ಯಾಪ್ಸಿಕಂ, ಕ್ಯಾರೆಟ್ ಇತರೆ ತರಕಾರಿ
ಅರ್ಧ ಸ್ಪೂನ್- ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಆಮ್ಚೂರು ಪುಡಿ,
ಅರಿಶಿನ, ಗರಂಮಸಾಲಾ, ಚಾಟ್ಮಸಾಲಾ ಉಪ್ಪು
ಬೇಯಿಸಿದ ಆಲೂಗಡ್ಡೆ ಒಂದು
ಬ್ರೆಡ್ ಸ್ಲೈಸ್ ಎರಡು
ಮಾಡುವ ವಿಧಾನ:
ಒಂದು ಬಾಣಲೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ, ಈರುಳ್ಳಿ ಹಾಕಿ ಬಾಡಿಸಿ ನಂತರ ಅದಕ್ಕೆ ನೀವು ತಿನ್ನು ತರಕಾರಿಗಳನ್ನು ಹೆಚ್ಚಿ ಹಾಕಿ ಮೆತ್ತಗಾಗುವ ಗಾಹೆ ಬಾಡಿಸಿ. ಬಳಿಕ ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಆಮ್ಚೂರು ಪುಡಿ,
ಅರಿಶಿನ, ಗರಂಮಸಾಲಾ, ಚಾಟ್ಮಸಾಲಾ ಉಪ್ಪು ಹಾಕಿ ಕಲಕಿ. ನೆನಸಿದ ಬ್ರೆಡ್ ಸ್ಲೈಸ್ ಹಾಗೂ ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ ಹಾಕಿ ಚೆನ್ನಾಗಿ ಸ್ಮಾಶ್ ಮಾಡಿ ಉಂಡೆ ಕಟ್ಟಿ. ಕಟ್ಟಿದ ಉಂಡೆಯನ್ನು ಬ್ರೆಡ್ ಸ್ಲೈಸ್ ಪುಡಿಯೊಂದಿಗೆ ಅದ್ದು ಪಡ್ಡು ಮಾಡುವ ಕಾವಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ತಿರುವಿ ಹಾಕುತ್ತಾ ಒಂದು ಲಾಲಿಪಪ್ ಕಡ್ಡಿ ಸಿಕ್ಕಿಸಿದರೆ ವೆಜ್ ಲಾಲಿಪರ್ ರೆಡಿ.